ಮೈಸೂರು: ಕರ್ನಾಟಕ ರತ್ನ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರು ನಟಿಸಿ ಭರ್ಜರಿ ಜಯಭೇರಿ ಹೊಡೆದ ಕೋಟಿಗೊಬ್ಬ ಚಿತ್ರ 25 ವರ್ಷಗಳ ನಂತರ ರೀ ರಿಲೀಸ್ ಆಗಿದೆ.

ಈ ಹಿನ್ನೆಲೆ ಚಾಮರಾಜ ಜೋಡಿ ರಸ್ತೆಯಲ್ಲಿರುವ ಗಾಯತ್ರಿ ಚಿತ್ರಮಂದಿರದಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು ಬೃಹತ್ ಕಟೌಟ್ ಅಳವಡಿಸಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ,ಅನ್ನದಾನ ಮಾಡಿ,ನ101 ತೆಂಗಿನಕಾಯಿ ಒಡೆದು ಸಂಭ್ರಮಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾಜಿನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ,ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್, ಪುಕಾರ್ ಸಿದ್ದಪ್ಪ, ಮದನ್ , ಬಸವರಾಜು, ಮಹದೇವ್ , ಸಂತೋಷ್, ನವೀನ್, ಅಭಿಮಾನಿಗಳು ಹಾಗೂ ನೂರಾರು ಆಟೋ ಚಾಲಕರು ಹಾಜರಿದ್ದರು.