ಮೈಸೂರು: ಡಿಸೇಲ್, ಪೆಟ್ರೋಲ್ ಉಳಿತಾಯದ ಬಗ್ಗೆ ಪ್ರಧಾನಿ ಮಾತಿಗೆ ಸಿಎಂ ತಕರಾರು ವಿಚಾರವಾಗಿ ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ವಿಶ್ವದ ಬಹು ದೊಡ್ಡ ಅರ್ಥಶಾಸ್ತ್ರಜ್ಞರು ಅವರಿಗಿಂತಾ ವಿಶ್ವದಲ್ಲಿ ಇನ್ನೂ ಯಾರಿಗೂ ಅರ್ಥಶಾಸ್ತ್ರ ಗೊತ್ತಿಲ್ಲ ಬಿಡಿ. ಸಿದ್ದರಾಮಯ್ಯ ಈ ನಾಡಿನಲ್ಲಿ ಹುಟ್ಟುವ ಪ್ರತಿ ಮಗುವಿನ ಮೇಲೆ ಸಾಲ ಹೊರಿಸಿದ್ದಾರೆ. ವಾಸ್ತವವಾಗಿ ಸಿದ್ದರಾಮಯ್ಯ ಗೆ ಅರ್ಥಶಾಸ್ತ್ರ, ಗಣಿತ ಅರ್ಥವೇ ಆಗಿಲ್ಲವೇನೋ. ಯುದ್ದಗಳ ಹಿನ್ನೆಲೆಯಲ್ಲಿ ಪ್ರಧಾನಿಗಳು ಉಳಿತಾಯದ ಒಂದು ಸಲಹೆ ಕೊಟ್ಟಿದ್ದಾರೆ.
ಅರ್ಥ ವ್ಯವಸ್ಥೆ ಅರ್ಥ ಮಾಡಿಕೊಂಡವರು ಅದನ್ನು ಸರಿ ಅಂದಿದ್ದಾರೆ. ಅರ್ಥಶಾಸ್ತ್ರವೆ ಗೊತ್ತಿಲ್ಲದವರು ಅದನ್ನು ತಪ್ಪು ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಮೋದಿ ಅವರಿಗೆ ಅರ್ಥ ವ್ಯವಸ್ಥೆ ಪಾಠ ಮಾಡಬೇಡಿ ಎಂದರು.
ನೀಟ್ ಪರೀಕ್ಷೆ ರದ್ದು ವಿಚಾರಚಾಗಿ ಮೈಸೂರಿನಲ್ಲಿ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿ ಪ್ರಶ್ನೆ ಪತ್ರಿಕೆ ಲೀಕ್ ಅನ್ನುವುದು ದೊಡ್ಡ ಪಿಡುಗು. ಇದನ್ನು ತಪ್ಪಿಸಲು ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಪೇಪರ್ ಲಿಕ್ ಮುಚ್ಚಿಟ್ಟಿಲ್ಲ. ಕರ್ಮಕಾಂಡ ಬಟ್ಟ ಬಯಲು ಮಾಡಿದೆ. ವ್ಯವಸ್ಥೆ ಸರಿಪಡಿಸಲು ಯತ್ನಿಸಿದೆ. ಕೆಪಿಎಸ್ಸಿಎಸ್ಸಿ ಥರ ಹಗರಣ ಆಗಿಯೂ ನೇಮಕಾತಿ ಪತ್ರವನ್ನು ಕೊಟ್ಟಿಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು ಎಂದು ಪರೀಕ್ಷೆ ರದ್ದು ಮಾಡಿದೆ ಎಂದರು.

