ಮೈಸೂರು: ಉರ್ದು ಭಾಷೆಗೆ ಅಧಿಕೃತ ಭಾಷೆಯ ಮಾನ್ಯತೆ ನೀಡುವಂತೆ ಸಿಎಂ ಡಿಕೆಶಿಗೆ SDPI ಪತ್ರ ಬರೆದಿದ್ದಾರೆ.
ತುಳು ಭಾಷೆಗೆ ಮಾನ್ಯತೆ ಕೊಟ್ಟಿರೋದು ಸ್ವಾಗತ. ರಾಜ್ಯಾದ್ಯಂತ ಉರ್ದು ಮಾತನಾಡುವ ಜನರಿದ್ದಾರೆ. ಉರ್ದು ಭಾಷೆಗೂ ಮಾನ್ಯತೆ ನೀಡುವಂತೆ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪತ್ರ ಬರೆದಿದ್ದಾರೆ.
ಕರ್ನಾಟಕದ ಪ್ರಮುಖ ಭಾಷೆಗಳಲ್ಲಿ ಉರ್ದು ಕೂಡ ಒಂದು. ರಾಜ್ಯದಲ್ಲಿ ಧೀರ್ಘ ಕಾಲದಿಂದ ಉರ್ದು ಮಾತನಾಡುತ್ತಾರೆ. ಉರ್ದು ಲಿಪಿ ಸಾಹಿತ್ಯ ಪರಂಪರೆ ಹೊಂದಿದೆ. 2011 ರಲ್ಲಿ ಮಾತೃ ಭಾಷೆಯ ದತ್ತಾಂಶ ಹೊಂದಿದೆ. ರಾಜ್ಯದಲ್ಲಿ 3.934 ಉರ್ದು ಸರ್ಕಾರಿ ಶಾಲೆಗಳಿವೆ. 302 ಅನುದಾನಿತ ಶಾಲೆಗಳಿವೆ. ಕನ್ನಡ ರಾಜ್ಯದ ಮುಖ್ಯ ಭಾಷೆ. ಉರ್ದು ಭಾಷೆಗೆ ಮಾನ್ಯತೆ ಕೊಡಿ ಎಂದು ಅಬ್ದುಲ್ ಮಜೀದ್ ಪತ್ರ ಬರೆದಿದ್ದಾರೆ.

