ಮೈಸೂರು: ಇಂದಿನಿಂದ ದಸರಾ ಗೋಲ್ಡ್ ಕಾರ್ಡ್ ಹಾಗೂ ವಿವಿಧ ಕಾರ್ಯಕ್ರಮಗಳ ಟಿಕೆಟ್ಸ್ ಮಾರಾಟ ಮಾಡಲಾಗುತ್ತದೆ. ಆನ್ ಲೈನ್ ಮೂಲಕ ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ಸ್ ಬುಕ್ಕಿಂಗ್ ಗೆ ಅವಕಾಶ ಇದೆ.
ಇಂದು ಬೆಳಿಗ್ಗೆ 11:30ರಿಂದ ದಸರಾ ಅಧಿಕೃತ ವೆಬ್ಸೈಟ್ ನಲ್ಲಿ ಟಿಕೆಟ್ಸ್ ಲಭ್ಯವಿದೆ. ದಸರಾ ಗೋಲ್ಡ್ ಕಾರ್ಡ್ 6500 ರೂ, ಜಂಬೂ ಸವಾರಿ ಮೆರಣಿಗೆಗೆ 3500 ರೂ, ಡ್ರೋನ್ ಶೋ ಗೆ1000 ರೂ ಹಾಗೂ ಪಂಜಿನ ಕವಾಯತು ವಿಕ್ಷಣೆಗೆ 1500 ರೂ ಟಿಕೆಟ್ ನಿಗದಿ ಮಾಡಲಾಗಿದೆ.
ಗೋಲ್ಡ್ ಕಾರ್ಡ್ ಪಡೆದವರಿಗೆ ದಸರಾದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೂ ಪ್ರವೇಶ ಇರಲಿದೆ. ಅರಮನೆ ,ಮೃಗಾಲಯ , ಹಾಗೂ ಚಾಮುಂಡಿ ಬೆಟ್ಟಕ್ಕೆ ಒಂದು ಭಾರಿ ಉಚಿತ ಪ್ರವೇಶ ಇರಲಿದ್ದು, ದಸರಾ ವೆಬ್ ಸೈಟ್ ನಲ್ಲಿ ಟಿಕೆಟ್ ಗಳು ಲಭ್ಯವಿದೆ.

