ಮೈಸೂರು: ಈ ಬಾರಿ ದಸರಾದಲ್ಲಿ ಚಲನಚಿತ್ರೋತ್ಸವ ರದ್ದಾದ ಹಿನ್ನಲೆ ಚಿತ್ರಪ್ರೇಮಿಗಳಿಗೆ ನಿರಾಸೆಯಾಗಿದೆ. ದಸರಾದ ಅವಿಭಾಜ್ಯ ಸಾಂಸ್ಕೃತಿಕ ಅಂಗವಾಗಿದ್ದ ಚಲನಚಿತ್ರೋತ್ಸವ ಏಕಾಏಕಿ ಚಲನಚಿತ್ರೋತ್ಸವ ರದ್ದು ಮಾಡಿದ ಸರ್ಕಾರದ ನಿಲುವನ್ನ ಸಂಸದ ಯದುವೀರ್ ಟೀಕಿಸಿದ್ದಾರೆ.

ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ.ಸ್ಥಳೀಯ ಕಲಾವಿದರು ಮತ್ತು ಚಲನಚಿತ್ರ ಪ್ರೇಮಿಗಳಿಗೆ ಅಪಚಾರ ಎಸಗಿದೆ. ಹಲವು ವರ್ಷಗಳಿಂದ ದಸರಾದ ಅವಿಭಾಜ್ಯ ಕಾರ್ಯಕ್ರಮವಾಗಿತ್ತು. ಯುವ ನಿರ್ದೇಶಕರಿಗೆ ವೇದಿಕೆ ಒದಗಿಸಿತ್ತು. ಅರ್ಥಪೂರ್ಣ ಸಿನಿಮಾಗಳಿಗೆ ಸಾಕ್ಷಿಯಾಗಿತ್ತು. ಚಿತ್ರರಂಗದ ಹಿರಿಯರನ್ನ ಸಂಪರ್ಕಿಸದೆ ನಿರ್ಧಾರ ಏಕಾಏಕಿ‌ ರದ್ದುಗೊಳಿಸಿರುವುದು ಖಂಡನೀಯ.

ಚಿತ್ರಪರಂಪರೆ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಉದಾಸೀನತೆ ಎಂದು ಟ್ವೀಟ್ ಮೂಲಕ ಯದುವೀರ್ ಒಡೆಯರ್ ಕಿಡಿ ಕಾರಿದ್ದಾರೆ.