ನಂಜನಗೂಡು: ಇಸ್ರೇಲ್ ಇರಾನ್ ಹಾಗೂ ಅಮೆರಿಕ ಯುದ್ಧದ ಪರಿಣಾಮ ನಂಜನಗೂಡಿನಲ್ಲಿ ಸಿಲಿಂಡರ್ ಗಾಗಿ ಗ್ರಾಹಕರು ದಿನನಿತ್ಯ ಪರದಾಡುತ್ತಿದ್ದಾರೆ. ನಗರದ ಶ್ರೀ ನಂಜುಂಡೇಶ್ವರ ಇಂಡಿಯನ್ ಗ್ಯಾಸ್ ಏಜೆನ್ಸಿ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ರಾಮಶೆಟ್ಟಿ ಲೇಔಟ್ ನಲ್ಲಿ ನಂಜುಂಡೇಶ್ವರ ಗ್ಯಾಸ್ ಕಚೇರಿದ್ದು ಸೋಮವಾರ ಗ್ರಾಹಕರು, ಗ್ಯಾಸ್ ಬುಕ್ ಮಾಡಲು, ಬೆಳಿಗ್ಗೆ 6:00 ಗಂಟೆಯಿಂದಲೇ ಸುಮಾರು 600 ರಿಂದ 700 ಜನ ಪ್ರತಿನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ. ಈ ಬಗ್ಗೆ ಕಚೇರಿಯಲ್ಲಿ ವಿಚಾರಿಸಿದಾಗ, ಸರ್ಕಾರದಿಂದ ಕಡಿಮೆ ಸಂಖ್ಯೆಯಲ್ಲಿ ಸಿಲಿಂಡರ್ ಸರಬರಾಜು ಆಗುತ್ತದೆ ನಾವು ಏನು ಮಾಡಲು ಸಾಧ್ಯವಾಗುವುದಿಲ್ಲ ಎನ್ನುವ ಉತ್ತರವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ ಎಂದು ರೈತ ಮುಖಂಡ ಕಲ್ಕುಂದ ರಾಹುಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಹಲವು ಗ್ಯಾಸ್ ಏಜೆನ್ಸಿಗಳಿದ್ದು ಯಾವುದೇ ಸಮಸ್ಯೆ ಇಲ್ಲದೆ ವಿತರಿಸಿದ್ದಾರೆ. ಆದರೆ ಶ್ರೀ ನಂಜುಂಡೇಶ್ವರ ಗ್ಯಾಸ್ ಏಜೆನ್ಸಿ ಮಾತ್ರ ಇಲ್ಲ ಸಲ್ಲದ ಉತ್ತರವನ್ನು ನೀಡಿ ಗ್ರಾಹಕರನ್ನು ದಿನ ನಿತ್ಯ ಅಲೆಸುತ್ತಿದ್ದಾರೆ. ಸುಮಾರು 30 ರಿಂದ 40 ಕಿಲೋಮೀಟರ್ ದೂರದಿಂದ ನಾಲ್ಕರಿಂದ ಐದು ದಿನ ಸಿಲಿಂಡರ್ ಗಾಗಿ ಆಲೆ ಸುವುದು ಎಷ್ಟು ಸರಿ.

ಗ್ಯಾಸ್ ಸಿಗುವ ದಿನಾಂಕವನ್ನು ಸಂಬಂಧಪಟ್ಟ ಮಾಲೀಕರು ತಿಳಿಸುತ್ತಿಲ್ಲ. ಈ ಬಗ್ಗೆ ತಾಲೂಕು ಆಡಳಿತ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಗ್ಯಾಸ್ ಪೂರೈಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಗ್ಯಾಸ್ ಏಜೆನ್ಸಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.