ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ನಟ-ರಾಜಕಾರಣಿ ವಿಜಯ್ ಅವರಿಗೆ ಸಂಬಂಧಿಸಿದ ವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕನ್ಯಾಕುಮಾರಿಯಲ್ಲಿ ನಡೆದ ಪ್ರಚಾರ ವೇಳೆ ಅಭಿಮಾನಿಯೊಬ್ಬ ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ಭಾವಿಸಿದ ವಿಜಯ್, ತಕ್ಷಣ ಸೈಕಲ್ ಬಿಟ್ಟು ಭದ್ರತಾ ಕಾರಿನತ್ತ ಓಡಿದ ದೃಶ್ಯ ಚರ್ಚೆಗೆ ಗ್ರಾಸವಾಗಿದೆ.
ತಮ್ಮ Tamilaga Vettri Kazhagam ಪಕ್ಷದ ಪರವಾಗಿ ವಿಜಯ್ ಸೈಕಲ್ ರೈಡ್ ನಡೆಸುತ್ತಿದ್ದರು. ಸಾವಿರಾರು ಅಭಿಮಾನಿಗಳ ನಡುವೆ ಅವರು ಸಾಗುತ್ತಿದ್ದ ವೇಳೆ, ಒಬ್ಬ ಅಭಿಮಾನಿ ಹೂವಿನ ಮಾಲೆಯನ್ನು ಅವರತ್ತ ಎಸೆದಿದ್ದಾನೆ. ಅದನ್ನು ಅಪಾಯಕಾರಿ ವಸ್ತು ಎಂದು ಭಾವಿಸಿದ ವಿಜಯ್ ತಕ್ಷಣ ಸೈಕಲ್ ಬಿಟ್ಟು ಅಲ್ಲಿಂದ ಓಡಿ ಭದ್ರತಾ ಕಾರಿನೊಳಗೆ ಸೇರಿದ್ದಾರೆ ಎನ್ನಲಾಗಿದೆ.

