ಮೈಸೂರು; ಸೌಹಾರ್ಧತೆ, ಭಾವೈಕ್ಯತೆ ಎಂಬ ಪದಗಳನ್ನ ಕೇವಲ ಭಾಷಣಗಳಲ್ಲಿ ಬಿಗಿಯುವ ಇಂದಿನ ದಿನಗಳಲ್ಲಿ ಮೈಸೂರು ಚಾಮರಾಜ ಕ್ಷೇತ್ರದ ಶಾಸಕ ಹರೀಶ್ ಗೌಡ ಹಲವು ಸಮುದಾಯಗಳನ್ನ ಒಟ್ಟುಗೂಡಿಸಿ ಸಂಕ್ರಾಂತಿ ಆಚರಿಸುವ ಮೂಲಕ ಜಾತ್ಯಾತೀತತೆ ಮೆರೆದಿದ್ದಾರೆ. ಮುಸಲ್ಮಾನ್ , ಕ್ರಿಶ್ಚಿಯನ್, ಜೈನ್, ಬಾಂಧವರಿಗೆ ಎಳ್ಳು ಬೆಲ್ಲ ಬಿರುವ ಮೂಲಕ ಭಾವೈಕ್ಯತೆ ಸಂದೇಶ ಸಾರಿದ್ದಾರೆ.
ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಮೈಸೂರು ಯುವ ಬಳಗದ ವತಿಯಿಂದ ಹಮ್ಮಿಕೊಂಡ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಮುಸಲ್ಮಾನ, ಕ್ರೈಸ್ತರು, ಜೈನ , ಪೋಲಿಸ್, ಪೌರಕಾರ್ಮಿಕರು, ಆಶಾ ಕಾರ್ಯಕರ್ತರು ಭಾವೈಕ್ಯತೆ ಬೆಸೆಯುವ ನಿಟ್ಟಿನಲ್ಲಿ ಗೋಪೂಜೆ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿ ಎಳ್ಳು, ಬೆಲ್ಲ , ಕಬ್ಬು,ಸೀರೆ ವಿತರಿಸುವ ಮೂಲಕ
ಸೌಹಾರ್ದತೆ ಸಾರಿದ್ದಾರೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹರೀಶ್ ಗೌಡ ರವರು ಇತಿಹಾಸದಲ್ಲಿ ಎಲ್ಲಾ ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದ್ದು, ಆದ್ದರಿಂದ ಎಲ್ಲಾ ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು.
ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆ ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಮುಖಂಡರುಗಳಾದ ಕಾಂತಿಲಾಲ್ ಜೈನ್, ಮಹಾದೇವ್, ಕನಕದಾಸ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ರವಿಚಂದ್ರ, ನವೀನ್, ಗುರುರಾಜ್, ನಂಜುಂಡಸ್ವಾಮಿ,ಸಂತೋಷ, ಇಮ್ರಾನ್ ಖಾನ, ಫಾತಿಮಾ, ಮುನ್ನಿ, ಇಸ್ರಾಮ, ಮಂಗಳ, ಶ್ರೀನಿವಾಸ,ಶೆಟ್ಟಿ, ಸುಬ್ರಹ್ಮಣ್ಯ, ಲೋಕೇಶ್, ಮಂಜುನಾಥ, ರಾಣಿ, ಜಗದೀಶ್, ಹೇಮಂತ್, ಚೆಲುವರಾಜು,ಹಾಗೂ ಇನ್ನಿತರರು ಹಾಜರಿದ್ದರು.

