ಗುಜರಾತ್ : ವಿಶ್ವ ಕ್ರಿಕೆಟ್ ನ ಸ್ಟಾರ್ ಆಟಗಾರ, ರನ್ ಮಷೀನ್, ಕಿಂಗ್ ಕೊಹ್ಲಿ ಎಂದೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿಗೆ ಅಭಿಮಾನಿಯೊಬ್ಬ ದುಬಾರಿ ಉಡುಗೊರೆ ತಂದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬರು ತನ್ನ ನೆಚ್ಚಿನ ಕ್ರಿಕೆಟಿಗನಿಗೆ ಗಿಫ್ಟ್ ನೀಡಲೆಂದು ಚಿನ್ನದಿಂದ ತಯಾರಿಸಿದ ಐಫೋನ್​ ಮೊಬೈಲ್ ಬ್ಯಾಕ್ ಕೇಸ್​ ತಂದಿದ್ದರು. ಇದರ ಬೆಲೆ ಬರೋಬ್ಬರಿ 1.5 ಮಿಲಿಯನ್ ಎಂದು ಅಭಿಮಾನಿ ಹೇಳಿಕೊಂಡಿದ್ದಾರೆ.

ಈ ಬ್ಯಾಕ್ ಕೇಸ್​ನಲ್ಲಿ ವಿರಾಟ್ ಕೊಹ್ಲಿ ಭಾವಚಿತ್ರ ಮತ್ತು ಅವರ ಹೆಸರನ್ನು ಕೂಡ ನಮೂದಿಸಲಾಗಿದೆ. ಈ ಚಿನ್ನದ ಬ್ಯಾಕ್​ ಕೇಸ್​ನ ಫೋಟೋ ಮತ್ತು ವಿಡಿಯೋಗಳು ಭಾರೀ ವೈರಲ್ ಆಗಿದೆ. ಆದ್ರೆ ಈ ಅಭಿಮಾನಿ ವಿರಾಟ್ ರನ್ನು ಭೇಟಿಯಾಗಿದ್ದಾರಾ..? ಕೊಹ್ಲಿ ಈ ಉಡುಗೊರೆ ಸ್ವೀಕರಿಸಿದ್ದಾರಾ..? ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.