ಮೈಸೂರು: ಸರಗೂರು ತಾಲ್ಲೂಕಿನ ಹಂಚಿಪುರ ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆ ಕಾಡಿನಿಂದ ನಾಡಿಗೆ ಎಂಟ್ರಿಕೊಟ್ಟ ಗಜರಾಜ ಆತಂಕ ಸೃಷ್ಟಿಸಿದ್ದಾನೆ. ಗ್ರಾಮಸ್ಥರ ಕೂಗಾಟ, ಕಿರುಚಾಟಕ್ಕೆ ಗ್ರಾಮದ ಹೊರವಲಯದಲ್ಲೆ ಆನೆಗಳು ಓಡಾಡಿವೆ. ಅರಣ್ಯ ಇಲಾಖೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳ ಗ್ರಾಮಸ್ಥರ ನೆರವಿನಿಂದ ಆನೆಗಳನ್ನ ಹಿಮ್ಮೆಟ್ಟಿಸಿದ್ದಾರೆ. ಮೂರು ಆನೆಗಳು ಲಗ್ಗೆ ಇಟ್ಟು ಆತಂಕ ಸೃಷ್ಟಿಸಿದೆ. ಗ್ರಾಮದ ಸುತ್ತಮುತ್ತ ಆಗಾಗ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಕಾಡು ಪ್ರಾಣಿಗಳು ಕಾಡಿನಿಂದ ಬಾರದಂತೆ ತಡೆಯಬೇಕು ಎಂದು ಅರಣ್ಯ ಇಲಾಖೆಗೆ ಹಂಚೀಪುರ ಗ್ರಾಮಸ್ಥರ ಒತ್ತಾಯಿಸಿದ್ದಾರೆ.