ನಂಜನಗೂಡು: ಕ್ಷುಲ್ಲಕ ಕಾರಣಕ್ಕೆ ವಿಶೇಷ ಚೇತನನಿಗೆ ಥಳಿಸಿರುವ ಘಟನೆ ತಾಲೂಕಿನ ತಗಡೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಮುದ್ದು ಮಾದೇಗೌಡ (40) ಗಾಯಗೊಂಡಿದ್ದು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಮಾರ್ಚ್ 31ರಂದು ಮುದ್ದು ಮಾದೇಗೌಡ ಎಂಬ ವಿಶೇಷ ಚೇತನ ಮೂರು ಚಕ್ರದ ಬೈಕಿನಲ್ಲಿ ಮನೆಗೆ ತೆರಳುವ ರಸ್ತೆಗೆ ಗ್ರಾಮದ ಬಸವಣ್ಣ ಎಂಬ ವ್ಯಕ್ತಿ ರಸ್ತೆಗೆ ಅಡ್ಡಲಾಗಿ ಮುಳ್ಳು ಹಾಕಿದ್ದಾನೆ.
ಮುಳ್ಳು ಹಾಕಿರುವ ವಿಷಯವನ್ನು ಮುದ್ದು ಮಾದೇಗೌಡ ಕೇಳಿದಾಗ ತಕ್ಷಣವೇ ಬಂದು ಅಡ್ಡ ಹಾಕಿ ವಿಶೇಷ ಚೇತನನಿಗೆ ಹಿಗ್ಗ ಮುಗ್ಗಾ ತಳಿಸಿದ್ದು ತಕ್ಷಣ ನಂಜನಗೂಡಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

