ಮೈಸೂರು: ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ 15 ತಿಂಗಳಲ್ಲಿ 421 ಶಿಶು ಮರಣ ಹೊಂದಿದೆ. ಮಾಜಿ ಶಾಸಕ ಎಲ್.ನಾಗೇಂದ್ರ ದಾಖಲೆ ಬಿಡುಗಡೆ ಮಾಡಿದ್ದಾರೆ. ಎಸ್ಎನ್ಸಿಯುಗೆ 3,486 ನವಜಾತಶಿಶುಗಳು ದಾಖಲಾಗಿದೆ.
ನಾನಾ ಕಾರಣಕ್ಕಾಗಿ ಚಿಕಿತ್ಸೆ ಫಲಿಸದೆ 421 ಶಿಶು ಮರಣ ಹೊಂದಿದೆ. ಜತೆಗೆ 12 ತಾಯಂದಿರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ನವಜಾತ ಶಿಶುಗಳ ಮರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಲಾಗಿದೆ. ತನಿಖೆಗೆ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನಿರಂತರ ಒತ್ತಡ ಹೇರುತ್ತಿದೆ. ಈ ಬೆನ್ನಲ್ಲೇ ಮಾಜಿ ಶಾಸಕ ಎಲ್.ನಾಗೇಂದ್ರ ದಾಖಲೆ ಬಿಡುಗಡೆ ಮಾಡಿದ್ದಾರೆ.
ಪೋಷಕರಲ್ಲಿ ದಾಖಲೆಗಳು ದೊಡ್ಡ ಆತಂಕ ಮೂಡಿಸಿದೆ. 1880ರಲ್ಲಿ ಮೈಸೂರು ಅರಸರಿಂದ ಚೆಲುವಾಂಬ ಆಸ್ಪತ್ರೆ ನಿರ್ಮಾಣವಾಗಿತ್ತು. ಐದಾರು ಜಿಲ್ಲೆಗಳ ಜನರಿಗೆ ಆಸ್ಪತ್ರೆ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಇದೀಗ ಚೆಲುವಾಂಬ ಆಸ್ಪತ್ರೆ ಸಾವಿನ ಮೃತ್ಯು ಕೂಪವಾಗಿದೆ. ಶಿಶು ಮರಣ ತಡೆಯುವಲ್ಲಿ ವಿಫಲವಾಗಿರುವ ಆಸ್ಪತ್ರೆ ಹಾಗೂ ಜಿಲ್ಲಾಡಳಿತ ವಿರುದ್ದ ಜನತೆಯ ಆಕ್ರೋಶ ವ್ಯಕ್ತಪಡಿಸಿದೆ.

