ಬೆಂಗಳೂರು: ತಾಯಿ ಜೊತೆ ಫೋನ್ ನಲ್ಲಿ ಮಾತನಾಡುತ್ತಿದ್ದ ಟೆಕ್ಕಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ರೈನ್ ಸ್ಟ್ರೋಕ್ ನಿಂದ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ.
ಹಾಸನ ಮೂಲದ ಶ್ಎಏತಾ(25) ಮೃತ ದುರ್ದೈವಿ.ಇವರು ಫೋನ್ನಲ್ಲಿ ದೀರ್ಘಕಾಲ ಮಾತನಾಡುತ್ತಿದ್ದ ಸಂದರ್ಭದಲ್ಲೇ ಬ್ರೈನ್ ಸ್ಟ್ರೋಕ್ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೂ, ಯುವತಿ ಈ ರೀತಿ ಪ್ರಾಣ ಕಳೆದುಕೊಂಡಿರುವುದು ನಗರದ ಜನತೆಯಲ್ಲಿ ಮತ್ತು ತಾಂತ್ರಿಕ ವಲಯದ ಉದ್ಯೋಗಿಗಳಲ್ಲಿ ಭೀತಿ ಮೂಡಿಸಿದೆ.
ಸಾಮಾನ್ಯವಾಗಿ ಅತಿಯಾದ ಫೋನ್ ಬಳಕೆ ಮತ್ತು ಅದರಿಂದ ಹೊರಬರುವ ವಿಕಿರಣಗಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲಿ ಶ್ವೇತಾ ಅವರು ಮಾತನಾಡುತ್ತಿರುವಾಗಲೇ ಮೆದುಳಿನ ರಕ್ತಸ್ರಾವ ಅಥವಾ ಸ್ಟ್ರೋಕ್ ಉಂಟಾಗಿರುವುದು ವೈದ್ಯಕೀಯ ಲೋಕಕ್ಕೆ ಅಚ್ಚರಿ ತಂದಿದೆ. ಅತಿಯಾದ ಮೊಬೈಲ್ ಫೋನ್ ಬಳಕೆ ಮಾಡುವವರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ.
ಈ ಘಟನೆಯು ಫೋನ್ನಲ್ಲಿ ದೀರ್ಘಕಾಲ ಮಾತನಾಡುವವರ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ. ಕೆಲಸದ ಒತ್ತಡ ಅಥವಾ ವೈಯಕ್ತಿಕ ಸಂಭಾಷಣೆಗಳಿಗಾಗಿ ಗಂಟೆಗಟ್ಟಲೆ ಫೋನ್ ಕಿವಿಗೆ ಅಂಟಿಸಿಕೊಳ್ಳುವವರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕೆಂದು ತಜ್ಞರು ಸೂಚಿಸುತ್ತಿದ್ದಾರೆ. ಹಾಸನ ಮೂಲದ ಈ ಯುವತಿಯ ಸಾವು ಅವರ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದ್ದು, ಟೆಕ್ಕಿಗಳ ಜೀವನಶೈಲಿ ಮತ್ತು ಆರೋಗ್ಯದ ಬಗ್ಗೆ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.

