Bengaluru 22°C
Ad

ಷೇರು ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆ: ಮೊದಲ ಬಾರಿಗೆ 78,000 ಮಟ್ಟವನ್ನು ದಾಟಿದ ಸೆನ್ಸೆಕ್ಸ್

ಬ್ಲೂ-ಚಿಪ್ ಬ್ಯಾಂಕ್ ಷೇರುಗಳು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಮಂಗಳವಾರ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮೊದಲ ಬಾರಿಗೆ ಐತಿಹಾಸಿಕ 78,000 ಮಟ್ಟವನ್ನು ದಾಟಿದರೆ, ನಿಫ್ಟಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

ಬೆಂಗಳೂರು : ಬ್ಲೂ-ಚಿಪ್ ಬ್ಯಾಂಕ್ ಷೇರುಗಳು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಿಗೆ ಮಂಗಳವಾರ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಚ್ ಮಾರ್ಕ್ ಸೆನ್ಸೆಕ್ಸ್ ಮೊದಲ ಬಾರಿಗೆ ಐತಿಹಾಸಿಕ 78,000 ಮಟ್ಟವನ್ನು ದಾಟಿದರೆ, ನಿಫ್ಟಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿತ್ತು.

30 ಕಂಪನಿಗಳ ಷೇರುಗಳ ಬಿಎಸ್ಇ ಸೆನ್ಸೆಕ್ಸ್ 712.44 ಪಾಯಿಂಟ್ಸ್ ಅಥವಾ ಶೇಕಡಾ 0.92 ರಷ್ಟು ಏರಿಕೆ ಕಂಡು, 78,053.52ರಲ್ಲಿತ್ತು . ದಿನದ ವಹಿವಾಟಿನ ಬೆಂಚ್ ಮಾರ್ಕ್ 823.63 ಪಾಯಿಂಟ್ ಅಥವಾ ಶೇಕಡಾ 1 ರಷ್ಟು ಏರಿಕೆಯಾಗಿ 78,164.71 ಅಂಕಗಳಿಗೆ ತಲುಪಿದೆ.

ನಿಫ್ಟಿ 183.45 ಪಾಯಿಂಟ್ ಅಥವಾ ಶೇಕಡಾ 0.78 ರಷ್ಟು ಏರಿಕೆ ಕಂಡು 23,721.30 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 216.3 ಪಾಯಿಂಟ್ ಅಥವಾ ಶೇಕಡಾ 0.91 ರಷ್ಟು ಏರಿಕೆಯಾಗಿ ಹೊಸ ಸಾರ್ವಕಾಲಿಕ ಗರಿಷ್ಠ 23,754.15 ಅಂಕಗಳಿಗೆ ತಲುಪಿದೆ.

ಸೆನ್ಸೆಕ್ಸ್ ನ 30 ಕಂಪನಿಗಳಲ್ಲಿ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಲಾರ್ಸನ್ ಆ್ಯಂಡ್​ ಟರ್ಬೋ, ಬಜಾಜ್ ಫಿನ್ ಸರ್ವ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್ ಅತಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಪವರ್ ಗ್ರಿಡ್, ಏಷ್ಯನ್ ಪೇಂಟ್ಸ್, ಟಾಟಾ ಸ್ಟೀಲ್, ನೆಸ್ಲೆ, ಮಾರುತಿ ಮತ್ತು ಜೆಎಸ್​​ಡಬ್ಲ್ಯೂ ಸ್ಟೀಲ್ ನಷ್ಟ ಅನುಭವಿಸಿದವು.

ಏಷ್ಯಾದ ಮಾರುಕಟ್ಟೆಗಳಾದ ಸಿಯೋಲ್, ಟೋಕಿಯೊ ಮತ್ತು ಹಾಂಗ್ ಕಾಂಗ್ ನಲ್ಲಿಯೂ ಏರಿಕೆ ಕಂಡು ಬಂದಿದ್ದರೆ ಶಾಂಘೈ ಮಾರಕಟ್ಟೆಯಲ್ಲಿ ಕಡಿಮೆ ವಹಿವಾಟು ನಡೆಯಿತು. ಇವೆಲ್ಲದರ ನಡುವೆ ಯುರೋಪಿಯನ್ ಮಾರುಕಟ್ಟೆಗಳು ನಕಾರಾತ್ಮಕ ವಹಿವಾಟು ನಡೆಸಿವೆ. ಇನ್ನು ಯುಎಸ್ ಮಾರುಕಟ್ಟೆಗಳು ಮಿಶ್ರ ಫಲ ಉಂಡವು.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಂಚ್​ಮಾರ್ಕ್ ದರವು 0.44 ರಷ್ಟು ಇಳಿದು ಬ್ಯಾರೆಲ್​​ಗೆ 85.63 ಡಾಲರ್​ಗೆ ತಲುಪಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸೋಮವಾರ 653.97 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ದಾಖಲೆಗಳು ತಿಳಿಸಿವೆ.

ಬಿಎಸ್ಇ ಬೆಂಚ್ ಮಾರ್ಕ್ ಸೋಮವಾರ 131.18 ಪಾಯಿಂಟ್ ಅಥವಾ ಶೇಕಡಾ 0.17 ರಷ್ಟು ಏರಿಕೆ ಕಂಡು 77,341.08 ಕ್ಕೆ ತಲುಪಿತ್ತು. ನಿಫ್ಟಿ 36.75 ಪಾಯಿಂಟ್ ಅಥವಾ ಶೇಕಡಾ 0.16 ರಷ್ಟು ಏರಿಕೆ ಕಂಡು 23,537.85 ಕ್ಕೆ ತಲುಪಿತ್ತು.

Ad
Ad
Nk Channel Final 21 09 2023
Ad