ನವದೆಹಲಿ: ಚಿನ್ನದ ಬೆಲೆ ಸತತವಾಗಿ ಇಳಿಯುತ್ತಿದೆ. ಇಂದು ಮಂಗಳವಾರ ಬಂಗಾರದ ದರ ಗ್ರಾಮ್​ಗೆ 70 ರೂ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ 12,540 ರೂನಿಂದ 12,470 ರೂಗೆ ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 13,604 ರೂ ಆಗಿದೆ.

ಕಳೆದ 10-12 ದಿನಗಳಿಂದ ಬಂಗಾರದ ದರ 915 ರೂಗಳಷ್ಟು ಕುಸಿತವಾಗಿದೆ. ಆಭರಣ ಚಿನ್ನದ ಬೆಲೆ 12,500 ರೂ ಗಡಿಯೊಳಗೆ ಬಂದಿದೆ. ಇಂದು ಸೋಮವಾರ ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ಬೆಲೆ ತುಸು ಏರಿಕೆ ಆಗಿದೆ. ಅದು ಬಿಟ್ಟರೆ ಎಂಸಿಎಕ್ಸ್, ಫ್ಯೂಚರ್ಸ್ ಇತ್ಯಾದಿಯಲ್ಲಿ ಹಳದಿ ಲೋಹದ ಬೆಲೆ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,24,700 ರುಪಾಯಿ ಇದೆ.

24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,36,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 19,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,24,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 19,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 19,000 ರೂ ಇದೆ.