Showing 20 of 4484 posts • Page 177 of 225
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅವರು ಮಂಗಳವಾರ ರಾತ್ರಿ 12.30ರ ಸುಮಾರಿಗೆ ಪಂಪ್ ಹೌಸ್ ಗಳಿಗೆ ದಿಢೀರ್ ಭೇಟಿ ನೀಡಿದರು.
ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ “ಮುಂದಿನ ಪೀಳಿಗೆಯ ಶಕ್ತಿ ಸಂಗ್ರಹ: ಸುಧಾರಿತ ಎಲೆಕ್ಟ್ರಾನಿಕ್ಸ್ ಮತ್ತು ಸಂವೇದಕ ತಂತ್ರಜ್ಞಾನಗಳ ಸಂಯೋಜನೆ” ವಿಷಯದ ಕುರಿತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪ್ರಾಯೋಜಿತ ಆರು ದಿನಗಳ ಅಟಲ್ ಎಫ್.ಡಿ.ಪಿ. ಕಾರ್ಯಾಗಾರ ಮತ್ತು ತರಬೇತಿ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ಆಯೋಜಿಸಲಾಯಿತು.
“ಸುರತ್ಕಲ್ ರೈಲ್ವೇ ಮೇಲ್ಸೇತುವೆ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಕಾಮಗಾರಿ ನಡೆಸಲು 78 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ನಡೆಸಲಾಗಿಲ್ಲ. ಸಂಬಂಧಪಟ್ಟ ಮನಪಾ ಸದಸ್ಯರಿಂದ ಹಿಡಿದು ಶಾಸಕರವರೆಗೆ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ.
ನಂತೂರು ಜಂಕ್ಷನ್ ಸಮೀಪವಿದ್ದ 99 ಮರಗಳನ್ನು ಅರಣ್ಯ ಇಲಾಖೆ ಅನುಮತಿ ಪಡೆದು, ತೆರವು ಮಾಡಲಾಗಿದೆ. ಜಂಕ್ಷನ್ ಸಮೀಪದ ಅಪಾರ್ಟ್ಮೆಂಟ್ ಬಳಿ 2 ಮೀ. ಬಿಟ್ಟು ಭೂಮಿ ಸಮತಟ್ಟು ಮಾಡಲಾಗಿದೆ.
ಡ್ರಾ ಸಂದರ್ಭ ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಡ್ರೀಮ್ ಡೀಲ್ ಗ್ರೂಪ್ ಸಂಸ್ಥೆಯಿಂದ ಇಬ್ಬರು ಸಿಬಂದಿಗಳ ಮೇಲೆ ಕೇಸು ದಾಖಲಿಸಲಾಗಿದ್ದು, ಸಂಸ್ಥೆಯಿಂದ ವಜಾಗೊಳಿಸಲಾಗಿದೆ.
‘ಪ್ರಸ್ತುತ ದಿನಗಳಲ್ಲಿ ಪಠ್ಯವನ್ನು ಓದಿ ಜ್ಞಾನಗಳಿಸುವುದರೊಂದಿಗೆ ಪ್ರಾಯೋಗಿಕ ಜ್ಞಾನವೂ ಅಗತ್ಯವೆಂಬುದನ್ನು ನಾವು ಅರಿಯಬೇಕು. ಉದ್ಯೋಗದಲ್ಲಿ ಉನ್ನತಿ ಪಡಯಲು ಅಗತ್ಯ ಕೌಶಲ್ಯಗಳನ್ನು ಕರಗತಗೊಳಿಸುವುದು ಅತ್ಯಗತ್ಯ’ ಎಂದು ಬೆಂಗಳೂರಿನ ಕಿಪ್ಲೋ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಪ್ರೀತಂ ಪೂವಾನಿ ಅಭಿಪ್ರಾಯಪಟ್ಟರು.
400 ಕೆ.ವಿ. ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಟವರ್ ನಿರ್ಮಾಣಕ್ಕೆ ಗುತ್ತಿಗೆ ಕಂಪೆನಿ ಅಧಿಕಾರಿಗಳು ಮುಂದಾಗುತ್ತಿದ್ದಂತೆಯೇ ರೈತ ಸಂಘದ ನೇತೃತ್ವದಲ್ಲಿ ಸ್ಥಳೀಯ ಸಂತ್ರಸ್ತ ರೈತರು ಕಾಮಗಾರಿ ನಿಲ್ಲಿಸಿ ಪ್ರತಿಭಟಿಸಿದ ಘಟನೆ ಬಂಟ್ವಾಳ ಕಸ್ಬ ಗ್ರಾಮದ ಅಗ್ರಹಾರ್ ಬಳಿಯ ದರ್ಬಳಕೆ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಪ್ರಗತಿ ಸ್ಟಡಿ ಸೆಂಟರ್ 18 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಗಳ ಪ್ರಗತಿ ವೈಭವ-2024 ಇಲ್ಲಿನ ಪುರಭವನದಲ್ಲಿ ನವೆಂಬರ್ 17 ರಂದು ನಡೆಯಿತು.
024-2027 ರ ಅವಧಿಗೆ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾಗಿ ಶ್ರೀ ನಂದಗೋಪಾಲ ಶೆಣೈಯವರು ಆಯ್ಕೆಯಾಗಿದ್ದಾರೆ.
ಗೂಡ್ಸ್ ವಾಹನವೊಂದು ಟಯರ್ ಬ್ಲಾಸ್ಟ್ ಆದ ಪರಿಣಾಮ ಪಲ್ಟಿಯಾಗಿದ್ದು, ಅದರಲ್ಲಿದ್ದ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿ, ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ ಆದ ಘಟನೆ ಸಂಭವಿಸಿದೆ.
ಮೃತಪಟ್ಟ ಕೂಲಿ ಕಾರ್ಮಿಕನ ಹೆಣವನ್ನು ರಸ್ತೆ ಬದಿ ಮಾಲೀಕ ಮಲಗಿಸಿ ಹೋದ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ.
ವಾರದ ರಜೆ ಕಳೆಯಲು ಮಂಗಳೂರಿಗೆ ಬಂದ ಮೂವರು ಸ್ನೇಹಿತೆಯರು ಈಜುಕೊಳದಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಆನ್ಲೈನಲ್ಲೇ ರೂಂ ಬುಕ್ ಮಾಡಿ ಮೂವರು ಒಟ್ಟಾಗಿ ಮಂಗಳೂರಿನ ಸೋಮೇಶ್ವರ ಬೀಚ್ ಬಳಿಯ ಖಾಸಗಿ ರೆಸಾರ್ಟಿನ ಈಜು ಕೊಳಕ್ಕಿಳಿದು ವಿಲ ವಿಲ ಒದ್ದಾಡಿ ಪ್ರಾಣ ಕಳೆದುಕೊಂಡಿದ್ದಾರೆ.
ಸಿಡಿಲು ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ಕೆದಿಲ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಇಲ್ಲಿನ ಮುರಿಯಾಜೆ ನಿವಾಸಿ ಚಂದ್ರಹಾಸ ಎಂಬವರ ಪುತ್ರ ಸುಭೋದ್(14) ಎಂದು ಗುರುತಿಸಲಾಗಿದೆ.
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾಗಿ ಜನಮನ್ನಣೆ ಪಡೆದಿದ್ದ ಡಿ.ಆರ್.ರಾಜು ಅವರು ಹೃದಯಾಘಾತಕ್ಕೆ ತುತ್ತಾಗಿ ಮೃತರಾಗಿದ್ದು ಅವರ ನಿಧನಕ್ಕೆ ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಬಿ.ಸಿ.ರೋಡ್ ನಿಂದ ಅಡ್ಡಹೊಳೆವರೆಗೆ ಚತುಷ್ಪಥ ರಸ್ತೆ ಕಾಮಗಾರಿಗೆ ವೇಗ ದೊರಕುತ್ತಿದ್ದಂತೆಯೇ ಬಿ.ಸಿ.ರೋಡ್ ನಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಮೂರನೇ ಸೇತುವೆ ಸಂಪೂರ್ಣಗೊಂಡು ವಾಹನ ಸಂಚಾರ ಆರಂಭಗೊಂಡಿದೆ.
ಈಜುಕೊಳದಲ್ಲಿ ಮೂವರು ಯುವತಿಯರ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸೋಮೇಶ್ವರದ VAZCO ಬೀಚ್ ರೆಸಾಟ್೯ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ.
ವೆನ್ಲಾಕ್ನಲ್ಲಿ ಅಗತ್ಯ ಹೊಸ ಕಟ್ಟಡಗಳೊಂದಿಗೆ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಬಗ್ಗೆ ಜನವರಿಯೊಳಗೆ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಖಾಸಗಿ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್ ನಲ್ಲಿ ನಡೆದಿದೆ.
ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಬೋಂದೆಲ್ ಮಂಗಳೂರು ದೇವಾಲಯದ ಶತಮಾನೋತ್ಸವ ಮತ್ತು ನವೀಕೃತ ನೂತನ ಚರ್ಚ್ನ ಉದ್ಘಾಟನೆಯ ಪ್ರಯುಕ್ತ ಬೃಹತ್ ಹೊರೆಕಾಣಿಕೆ ಮೆರವಣಿಗೆ ಮಂಗಳೂರಿನ ಮೇರಿಹಿಲ್ನ ಮೌಂಟ್ ಕಾರ್ಮೆಲ್ ಶಾಲಾ ಆವರಣದಿಂದ ಬೋಂದೆಲ್ ಚರ್ಚ್ ವರೆಗೆ ನಡೆಯಿತು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ಕೋವಿಡ್ ಹಗರಣದ ಕುರಿತು ನ್ಯಾ.ಡಿಕುನ್ಹಾ ಪ್ರಥಮ ವರದಿ ನೀಡಿದ್ದಾರೆ.