Showing 20 of 4480 posts • Page 160 of 224
ಮಕ್ಕಳ ಹ್ರದ್ರೋಗ ಉಚಿತ ತಪಾಸಣಾ ಶಿಬಿರ ಜ. 16 ರಂದು ಕುಂಟಿಕಾನ ಎ,ಜೆ ಆಸ್ಪತ್ರೆ ಹೊರರೋಗಿ ವಿಭಾಗದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಡಾ. ಪ್ರೇಮ್ ಆಳ್ವ ಮಾಹಿತಿ ನೀಡಿದರು.
ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ನ ಫ್ರೆಂಚ್ ವಿಭಾಗ, ಸ್ಕೂಲ್ ಆಫ್ ಲ್ಯಾಂಗ್ವೇಜಸ್ ಅಂಡ್ ಕಲ್ಚರಲ್ ಸ್ಟಡೀಸ್ ವಿಭಾಗವು ಬಹುನಿರೀಕ್ಷಿತ ಫ್ರೆಂಚ್ ಫೆಸ್ಟ್, ಎಕ್ಲೋಷನ್ 2025
ಳಂಕಿತ ಪೊಲೀಸ್ ಕಮಿಷನರ್ ಅನುಪಮ ಅಗ್ರವಾಲ್ ಅಮಾನತಿಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಭಿತ್ತಿಪತ್ರ ಪ್ರದರ್ಶಿಸಿ ಘೆರಾವ್ ಹಾಕಲು ಪ್ರಯತ್ನಿಸಿದ ಡಿವೈಎಫ್ಐ ಕಾರ್ಯಕರ್ತರನ್ನು ಪೊಲೀಸರು ಬಂಧನ ಮಾಡಿದರು.
ಪಾಲಿಕೆಯ ಹಾಲಿ ಆಡಳಿತ ಅವಧಿ ಮುಕ್ತಾಯಕ್ಕೆ ಇನ್ನು 49 ದಿನ ಮಾತ್ರ ಬಾಕಿ ಉಳಿದಿದೆ. ಆದರೆ ಪಾಲಿಕೆ ಮುಂದಿನ ಚುನಾವಣೆಗೆ ನಡೆಯ ಬೇಕಾಗಿದ್ದ ಸಿದ್ಧತೆ ಪ್ರಕ್ರಿಯೆ ಆರಂಭವಾಗಿಲ್ಲ.
ದಕ್ಷಿಣಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ವೆನ್ಲಾಕ್ನಲ್ಲಿ 176 ವರ್ಷಗಳ ಇತಿಹಾಸದಲ್ಲಿ ಇಂದು ಮೊದಲ ಬಾರಿಗೆ ಅಂಗಾಂಗ ದಾನ ನಡೆದಿದ್ದು, ಮೆದುಳು ನಿಷ್ಕ್ರಿಯವಾದ ಮಹಿಳೆಯ ಎರಡು ಕಣ್ಣು ಮತ್ತು ಲಿವರ್ ದಾನ ಪ್ರಕ್ರಿಯೆ ನಡೆಯಿತು.
ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಸಾರಿಗೆ ಬಸ್ ಪಾಸ್ ವಿತರಣೆ ಮಾಡಲು ಸರಕಾರ ರಚಿಸಿರುವ ರಾಜ್ಯ ಸಮಿತಿ ಸದಸ್ಯರಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ
ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ವಕ್ತಾರೆ ಸುರಭಿ ಹೊಡಿಗೆರೆ ಪತ್ರಿಕಾಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳೂರು ಪ್ರೆಸ್ ಕ್ಲಬ್ ನ ಗೃಹ ಪತ್ರಿಕೆ ” ಮಂಗಳೂರು ಪ್ರೆಸ್ ಕ್ಲಬ್ ಸಮಾಚಾರ” ಇ-ಪೇಪರ್ ನ 4ನೇ ಸಂಚಿಕೆಯನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಬುಧವಾರ ಬಿಡುಗಡೆಗೊಳಿಸಿದರು.
ಮೆಸ್ಕಾಂ ಉದ್ಯೋಗಿ ಯಾಗಿದ್ದ ರಘು ಅವರು ಇತ್ತೀಚೆಗೆ ಆಕಸ್ಮಿಕವಾಗಿ ಮೃತ ಪಟ್ಟ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ನಲ್ಲಿ ಮೆಸ್ಕಾಂ ಉದ್ಯೋಗಿಗಳ ಖಾತೆ
ಮಕರ ಸಂಕ್ರಮಣ ಹಾಗೂ ವಾರಾಂತ್ಯದ ಸರಣಿ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ/ ಕಾರವಾರಕ್ಕೆ 25.100 ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ರೈಲು ಸಂಚರಿಸಲಿದೆ.
ಸೈಬರ್ ಕ್ರೈಂ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಇಎನ್ ಕ್ರೈಂ ಪೊಲೀಸರು ಕೇರಳದ ತ್ರಿಶೂರಿನ ನಿಧಿನ್ ಕುಮಾರ್ ಕೆ.ಎಸ್ ನನ್ನು ಬಂಧಿಸಿದ್ದಾರೆ.
ಗೋವಾದಿಂದ ಮಂಗಳೂರು ಹಾಗೂ ಕೇರಳಕ್ಕೆ 73 ಲಕ್ಷ ಮೌಲ್ಯದ ಹೈಡ್ರೋವೀಡ್ ಗಾಂಜಾ ತೆಗೆದುಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಾಮಂಜೂರಿನಲ್ಲಿ ನಡೆದ ಗನ್ ಮಿಸ್ ಫೈರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗನ್ ಪೈರ್ ಮಾಡಿದ್ದ ಆರೋಪಿ ಪೊಲೀಸರಿಗೆ ಎರಡೆರಡು ಕಟ್ಟು ಕಥೆ ಹೇಳಿದ್ದ
ಬಹುಭಾಷಾ ಸಾಹಿತಿಗಳು, ಹದಿನೈದು ಪುಸ್ತಕಗಳ ಪ್ರಕಾಶನ ಮಾಡಿದ ,ಕಳೆದ ನಲ್ವತ್ತು ವರ್ಷಗಳ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಅವರನ್ನು ದಕ ಜಿಲ್ಲಾ ಮಂಗಳೂರು ಹೋಬಳಿ
ಕ್ಯಾಲೆಂಡರ್ ಗಳು ಬದಲಾದಂತೆ, ಜನತೆಯ ಸಂಕಷ್ಟಗಳು ಹೆಚ್ಚುತ್ತಾ ಹೋಗುತ್ತಿದೆ. ಬದಲಾವಣೆಯ ನಿರೀಕ್ಷೆಗಳು ಹುಸಿಯಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆ ಪೂರ್ತಿಯಾಗಿ ಶಿಕ್ಷಣ, ಆರೋಗ್ಯ, ರಿಯಲ್ ಎಸ್ಟೇಟ್ ಲಾಭಿಗಳ ಕೈಗೆ ಸಿಲುಕಿದೆ.
ಸಿಂಗಾಪುರ ನಡುವಣ ನೇರ ವಿಮಾನ ಹಾರಾಟ ಕೆಲವು ದಿನಗಳ ಕಾಲ ವಿಳಂಬಗೊಳ್ಳುವ ಸೂಚನೆ ಕಂಡು ಬಂದಿದೆ. ಇಂಡಿಯನ್ ಏರ್ಲೈನ್ಸ್ జ. 21రిం ವಾರದಲ್ಲಿ ಎರಡು ದಿನಗಳ ಕಾಲ ಈ ವಿಮಾನ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಲಾಗಿತ್ತು.
ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಒಂದಾದ ಬಿಜೈ ಕೆಎಸ್ಸಾರ್ಟಿಸಿ ಜಂಕ್ಷನ್ನಲ್ಲಿ ಸಿಗ್ನಲ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಈ ಜಂಕ್ಷನ್ನಲ್ಲಿ ಈ ಹಿಂದೆ ಟ್ರಾಫಿಕ್ ಸಿಗ್ನಲ್ ಕಂಬಗಳು ಇದ್ದರೂ ಅದನ್ನು ಕಾರ್ಯಾಚರಣೆ ಮಾಡುತ್ತಿರಲಿಲ್ಲ.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷದ ಅವಧಿಗೆ ಅಧಿಕೃತವಾಗಿ ಶ್ರೀ ರಮೇಶ್ ಕಂಡೆಟ್ಟು ರವರು ಆಯ್ಕೆಯಾದರು.
ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಮಂಗಳೂರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಸಂದರ್ಭ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಲೇಡಿಹಿಲ್ನ ನಾರಾಯಣಗುರು ವೃತ್ತದ ಬಳಿ ಫುಟ್ ಪಾತ್ಗೆ ಅಳವಡಿಸಲಾದ ರೇಲಿಂಗ್ (ಸ್ಟೀಲ್ ಸರಳುಗಳು)ಗಳಲ್ಲಿ ಕೆಲವು ಕಿತ್ತು ಹೋಗಿ ಕೆಳಕ್ಕೆ ಬಿದ್ದಿವೆ.