ಮಂಗಳೂರು: ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ಧರಾಮಯ್ಯ ಅವರು ಮಹಾನಗರ ಪಾಲಿಕೆ ಮತ್ತು ಸ್ವಚ್ಛ ಮಂಗಳೂರು ಆಶ್ರಯದಲ್ಲಿ ಬೀಚ್ ಕ್ಲೀನಿಂಗ್ ಮಾಡಿದರು. ಮಂಗಳೂರಿನಲ್ಲಿ ಡಿಸಿಎಂ ಯತಿಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಮಂಗಳೂರು ಮಹಾ ನಗರ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ್ದೇನೆ. ಸ್ವಚ್ಛತೆಯ ಸೇವೆ ಅಭಿಯಾನದಡಿ ಬೀಚ್ ಸ್ವಚ್ಛಗೊಳಿಸಿದ್ದೇವೆ ಎಂದರು.
ಸ್ವಚ್ಛತ ಪ್ರತಿಜ್ಞೆ ಬೋಧಿಸಿದ್ದೇನೆ. ಮಂಗಳೂರಿನಲ್ಲಿ ನಾಳೆ ಸಂಪುಟ ಸಭೆ ಹಿನ್ನಲೆ ಮಂಗಳೂರಿನ ಅಭಿವೃದ್ಧಿಗೋಸ್ಕರ ಏನೇನು ಮಾಡಬೇಕು ಅದನ್ನ ಮಾಡುತ್ತೇವೆ ಎಂದರು.
ಮದ್ದೂರಿನಲ್ಲಿ ಗಣೇಶೋತ್ಸವಕ್ಕೆ ಮಸೀದಿ ಎದುರು ಪಟಾಕಿ ಸಿಡಿಸಿದ ವಿಚಾರವಾಗಿ ಬಿಜೆಪಿಯವರಿಗೆ ದುರುದ್ದೇಶ ಇದೆ. ಎಲ್ಲಾ ಕಡೆ ಕೋಮುಗಲಭೆ ಮಾಡಬೇಕು ಎಂದು ಅದರಿಂದ ರಾಜಕೀಯ ಲಾಭ ಪಡೆಯಬೇಕು. ಕೋಮುಗಲಭೆ ನಡೆಸಲು ಪ್ರಚೋದನೆ ಮಾಡುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಬಾಲ ಬಿಚ್ಚೊದಕ್ಕೆ ನಾವು ಬಿಡೋದಿಲ್ಲ. ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅವರು ಏನು ಬೇಕಾದರೂ ಮಾಡಲಿ ಆದರೆ ಕಾನೂನಿನಡಿಯಲ್ಲಿ ಮಾಡಲಿ ಎಂದರು.
ಬಂಟ್ವಾಳ ಅಬ್ದುಲ್ ರೆಹಮಾನ್ ಕೊಲೆ ಆರೋಪಿ ಭರತ್ ಕುಮ್ಡೆಲ್ ಗೆ ಜಾಮೀನು ವಿಚಾರವಾಗಿ ಇದು ನಮ್ಮ ಸರಕಾರದ ವೈಫಲ್ಯವಲ್ಲ ಎಂದರು. ಜಾಮೀನು ಕಾನೂನಿನಡಿ ಸಿಕ್ಕಿರುತ್ತದೆ. ನಮ್ಮ ಸರಕಾರ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಲು ಪ್ರಯತ್ನಪಡುತ್ತದೆ. ಆದರೂ ನಮ್ಮ ಹೋರಾಟ ಅಪರಾಧಗಳ ವಿರುದ್ಧ ಮುಂದುವರೆಯುತ್ತದೆ ಎಂದರು.
ನಾಳೆ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಹೆಚ್ಚಿನ ಆದ್ಯತೆ ನೀಡುತ್ತೇವೆ. ಕರಾವಳಿ ಪ್ರವಾಸೋದ್ಯಮ ನೀತಿಯಡಿ ಹೆಚ್ಚಿನ ಕಾರ್ಯಕ್ರಮ ಹಾಕಿಕೊಂಡಿದ್ದೀವಿ. ಕರಾವಳಿ ಮತ್ತು ಮಲೆನಾಡು ಅಭಿವೃದ್ಧಿ ಪಡಿಸಲು ಹೊಸ ಪ್ರವಾಸೋದ್ಯಮ ನೀತಿ ತಂದಿದ್ದೇವೆ. ಹೆಚ್ಚು ಪ್ರವಾಸಿಗರು ಬಂದ್ರೇನೇ ಅಭಿವೃದ್ಧಿ ಯಾಗುತ್ತೆ. ಪ್ರವಾಸೋದ್ಯಮ ಹೆಸರಲ್ಲಿ ಮಾದಕವಸ್ತುಗಳ ಬಳಕೆಗೆ ಅವಕಾಶ ಕೊಡೋದಿಲ್ಲ. ಅದು ಸಾಧ್ಯವಿಲ್ಲ ಎಂದರು.

