ಮಂಗಳೂರು : ಉಡುಪಿ ಜಿಲ್ಲಾಧಿಕಾರಿಯವರು ಭಗವಾದ್ವಜದ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದನ್ನು ರಮಾನಾಥ್ ರೈ ಖಂಡಿಸಿದ್ದಾರೆ.

ಕೇಸರಿ ಧ್ವಜ ಹಿಡಿದು ಹಾರಿಸಿದನ್ನ ಎಲ್ಲಾ ಕಾಂಗ್ರೆಸಿಗರು ತಪ್ಪು ಅಂತ ಹೇಳಬೇಕು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ‘ಉಪವಾಸ ಸತ್ಯಾಗ್ರಹದಲ್ಲಿ ರಮಾನಾಥ್ ರೈ ಹೇಳಿಕೆ ನೀಡಿದರು.

ದೇವಸ್ಥಾನದಲ್ಲಿ ಕಾಂಗ್ರೆಸ್ ಪತಾಕೆ, ಕೇಸರಿ, ಹಸಿರು ಯಾವುದೇ ಪತಾಕೆ ಹಾಕಬೇಡಿ. ದೇವಸ್ಥಾನದ ಕಾರ್ಯಕ್ರಮ, ಎಲ್ಲರಿಗೂ ಸಮಾನವಾದ ಕಾರ್ಯಕ್ರಮ. ಯಾವುದೇ ರಾಜಕೀಯ ಪ್ರೇರಿತ ಪತಾಕೆ ಯಾರು ಹಾರಿಸ್ತಾರೆ ಅದನ್ನ ನಾವು ಧಿಕ್ಕರಿಸಬೇಕು.

ಉದ್ಯೋಗ ಖಾತರಿ (MGNREGA) ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಿಸಿರುವುದನ್ನು ಖಂಡಿಸಿ ಹಾಗೂ ಕಾಯ್ದೆಯ ಮರುಜಾರಿಗೆ ಆಗ್ರಹಿಸಿ ಮಂಗಳೂರು ಗಾಂಧಿ ಪ್ರತಿಪೇಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಯಿತು.