ಮಂಗಳೂರು: ಅಸ್ತಿತ್ವ (ರಿ.) ಮಂಗಳೂರು ತನ್ನ ದಶಮಾನೋತ್ಸವ ಸಂದರ್ಭದಲ್ಲಿ, ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇದರ ಸಹಯೋಗದಲ್ಲಿ ಎರಡು ದಿನಗಳ ಕಾಲ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮೊದಲ ದಿನ, ದಿನಾಂಕ 19-02-2026 ರಂದು ಕೀರ್ತನ ನಾಯ್ಗ ಇವರ ಮುಂದಾಳತ್ವದಲ್ಲಿ ‘ಸುರೋಂ ಕೀ ಮೆಹಫಿಲ್’ ಎಂಬ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ದಿನಾಂಕ 20-02-2026ರಂದು ಜೇಸನ್ ಲೋಬೋ ಇವರ ಮುಂದಾಳತ್ವದಲ್ಲಿ “ಮಿಸ್ತೇರಿಯುಮ್” ಎಂಬ ಅಧ್ಯಾತ್ಮಿಕ ಹಾಡುಗಳ ಕಾರ್ಯಕ್ರಮ ಜರಗಲಿದೆ.

ಎರಡೂ ಸಂಗೀತ ಕಾರ್ಯಕ್ರಮಗಳು ಮದರ್ ಥೆರೇಸಾ ಉದ್ಯಾನವನದಲ್ಲಿ, ಪ್ರಕೃತಿಯ ಮಡಿಲಿನಲ್ಲಿ ವಿಶಿಷ್ಟವಾದ ಸಂಯೋಜನೆಯೊಂದಿಗೆ ನಡೆಯಲಿದೆ. ಎರಡೂ ಕಾರ್ಯಕ್ರಮಗಳು ಸಂಜೆ 6.30 ಘಂಟೆಗೆ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಮುಕ್ತವಾದ ಪ್ರವೇಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಎರಡೂ ಕಾರ್ಯಕ್ರಮಗಳಿಗೆ ಅರೆಹೊಳೆ ಪ್ರತಿಷ್ಠಾನ, ಗೆಳೆಯರ ಬಳಗ ಮಂಗಳೂರು ಹಾಗೂ ಕನ್ನಡ ವಿಭಾಗದ ಸಹಭಾಗಿತ್ವವನ್ನು ಪಡೆದಿದೆ.

