ಮಂಗಳೂರು : ಮುಳ್ಳೂರು ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ನಡೆದ ಕಾಮಗಾರಿಯಿಂದ ಸರ್ವಿಸ್ ರಸ್ತೆಯಲ್ಲಿ ಬಿರುಕು ಕಾಣಿಸಿದ್ದು, ಸ್ಥಳೀಯರು ಹಾಗೂ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ರಸ್ತೆ ಕುಸಿತ ಭೀತಿ ಹಿನ್ನೆಲೆಯಲ್ಲಿ ಫೆ.12ರಿಂದ ಮಾ.13ರವರೆಗೆ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸ್ಥಳೀಯರ ಆರೋಪದಂತೆ, ಹೊಸ ಹೆದ್ದಾರಿ ನಿರ್ಮಾಣ ವೇಳೆ ಹಳೆ ರಸ್ತೆಯ ವಕ್ಕದಲ್ಲಿ ಹತ್ತಾರು ಆಡಿ ಆಳದವರೆಗೆ ಮಣ್ಣು ಆಗದ ಪರಿಣಾಮ ಸರ್ವಿಸ್ ರಸ್ತೆ ದುರ್ಬಲಗೊಂಡಿದೆ. ಪ್ರತಿದಿನ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯ ಪಕ್ಕದಲ್ಲೇ ಐದಾರು ಮೀಟರ್ ಆಳದವರೆಗೆ ಆಗದಿರುವುದರಿಂದ ರಸ್ತೆ ಬಿರುಕು ಬಿಟ್ಟಿದ್ದು, ಮಳೆಗಾಲದಲ್ಲಿ ರಸ್ತೆ ಕುಸಿಯುವ ಸಾಧ್ಯತೆ ಇದೆ. ಮಳೆಗಾಲದಲೇ ಜಗದ ಕುಸಿತ ಭೀತಿ ಬೇಸಿಗೆ ಯಲ್ಲಿ ಹೇಗೆ ಉಂಟಾಯಿತು? ಇದಕ್ಕೆ ಹೊಣೆ ಯಾರು? ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ದೂರ ಪ್ರಯಾಣಿಕರಿಗೆ ವರ್ಯಾಯ ಮಾರ್ಗ ಲಭ್ರವಾ ದರೂ, ಎಡಪದವು, ಮಿಜಾರು ಭಾಗದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಚೂರು ಕ್ರಾಸ್ನಿಂದ ಎಡಪದವಿನವರೆಗೆ ನಡೆದುಕೊಂಡು ಬರಬೇಕಾದ ವರಿಸ್ಥಿತಿ ನಿರ್ಮಾಣವಾಗಿದೆ. ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಎಡಪದವು ಪೇಟೆ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ. ಮಂಗಳೂರಿಗೆ ತೆರಳಲು ಪ್ರಯಾಣಿಕರು ದಡ್ಡಿಕ್ರಾಸ್ ಅಥವಾ ಅರ್ಜುನಕೋಡಿ ಮೂಲಕ ತೆರಳಿ ಬಸ್ ಹತ್ತಬೇಕಾಗಿದೆ. ಇದಕ್ಕಾಗಿ ನೂರಾರು ರೂ. ರಿಕ್ಷಾ ಬಾಡಿಗೆ ನೀಡುವ ಅನಿವಾರ್ಯತೆ ಎದುರಾಗಿದೆ. ಮಾರ್ಗ ಬದಲಾವಣೆ ಬ್ಯಾನರ್ ಗೊಂದಲದ ಗೂಡುಕೂಡ ಆಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ತಾತ್ಕಾಲಿಕ ಮಾರ್ಗ ಬದಲಾವಣೆಯ ಸೂಚನಾ ಫಲಕಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸು ತ್ತಿವೆ. ಬ್ಯಾನನ್ನಲ್ಲಿ ಮಾರ್ಗ ಬದಲಾವಣೆ ಮಾಹಿತಿ ನೀಡಲಾಗಿದೆಯೇ ಹೊರತು, ಅದನ್ನು ಯಾವ ಇಲಾಖ ಪ್ರಕಟಿಸಿದೆ ಎಂಬ ಮಾಹಿತಿ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯರು ಶಾಸಕ ಭರತ್ ಶೆಟ್ಟಿ ಅವರಿಗೆ ದೂರು ನೀಡಿದ್ದು, ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಯಾವುದೇ ಆದೇಶ ಹೊರಡಿಸುವಾಗ ಅಥವಾ ಸಾರ್ವಜನಿಕರಿಗೆ ಸೂಚನೆ ನೀಡುವಾಗ ಅದನ್ನು ಯಾವ ಇಲಾಖೆ ಪ್ರಕಟಿಸಿದೆ ಎಂಬ ಮಾಹಿತಿ ಬ್ಯಾನರ್ ನಲ್ಲಿ ಇರಲೇಬೇಕು. ಆದರೆ ಇಲ್ಲಿ ಮಾರ್ಗ ಬದಲಾವಣೆ ಮಾಹಿತಿ ಮಾತ್ರ ಇದೆ. ಇದು ಗುತ್ತಿಗೆದಾರರ ಮತ್ತು ಸಂಬಂಧಪಟ್ಟ ಇಲಾಖೆಗಳ ಬೇಜವಾಬ್ದಾರಿ ಎತ್ತಿ ತೋರಿಸುತ್ತದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ . ಹೆದ್ದಾರಿ ಕಾಮಗಾರಿಯಿಂದ ಅನನುಕೂಲವೇ ಹೆಚ್ಚಾಗಿದೆ. ಕಿಲೋಮೀಟರ್ ಗಟ್ಟಲೆ ನಡೆದು ಬಸ್ ಹತ್ತುವ ಪರಿಸ್ಥಿತಿ ಬಂದಿದೆ. ವೃದ್ಧರು, ಮಹಿಳೆಯರು, ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ರಸ್ತೆಯ ಮೇಲೆ ಬಿದ್ದ ಮಣ್ಣು ತೆಗೆಯುವ ಕಾರ್ಯಾಚರಣೆ ಬರದಿಂದ ಸಾಗುತ್ತಿದೆ.

