ಮಂಗಳೂರು: ಈಗಾಗಲೇ ಸರ್ಕಾರದ ಒಳ ಮೀಸಲಾತಿಯ ಬಗ್ಗೆ ರಾಜ್ಯದಲ್ಲಿ ಸುಮಾರು 101 ಜಾತಿಯ ಪರ ಮೀಸಲಾತಿಯಲ್ಲಿ ಸರ್ಕಾರ ದೊಡ್ಡ ಧೋರಣೆಯನ್ನು ಮಾಡಿದೆ. ಈ 101 ಜಾತಿಗೆ ಆದ ಧೋರಣೆಯಿಂದ ಎಲ್ಲಾ ಮಕ್ಕಳು ಕಂಗಳಾಗಿ ಹೋಗಿದ್ದಾರೆ. ಈ ಸಮಸ್ಯೆಯಿಂದಾಗಿ ರಾಜ್ಯದಲ್ಲಿ 101 ಜಾತಿಯ ಸಮುದಾಯದವರು ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದು ಸರ್ಕಾರದ ವಿರುದ್ಧ ಹಲವಾರು ಬಾರಿ ಪ್ರತಿಭಟನೆಯನ್ನು ಮಾಡಲಾಯಿತು.

ಸರ್ಕಾರಕ್ಕೆ ಪ್ರತಿಭಟನೆಯನ್ನು ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ತರಾತುರಿಯಾಗಿ ಒಳ ಮೀಸಲಾತಿ ಹಂಚಿಕೆಯನ್ನು ಮಾಡಿ ರಾಜ್ಯದ ಜನರಿಗೆ ತೊಂದರೆ ನೀಡಬಾರದೆಂದು ಮನವಿ ಮಾಡಿದರು ಕೂಡ ಸರ್ಕಾರ ಏಕಾಏಕಿಯಾಗಿ ಒಳಮಿಸಲಾತಿ ಹಂಚಿಕೆಯನ್ನು ಬಿಡುಗಡೆ ಮಾಡಿದ್ದು ಖಂಡನಿಯ. ಒಟ್ಟಾರೆ ಹೇಳುವುದಾದರೆ ತಾರತಮ್ಯದ ಮೀಸಲಾತಿ ಹಂಚಿಕೆ ಮಾಡಿದ ಸರ್ಕಾರ ಸರಿಯಲ್ಲ.

ಬಂಜಾರ, ಭೋವಿ, ಕೋರಮ ಮತ್ತು ಅಲೆಮಾರಿ ಜನಾಂಗದವರಿಗೆ ಅನ್ಯಾಯವಾಗಿದೆ ಹಾಗೂ ಸೂಕ್ಷ್ಮ ಸಮುದಾಯದವರಿಗೆ ಕೂಡ ಈ ಒಳ ಮೀಸಲಾತಿಯ ಹಂಚಿಕೆಯಿಂದ ಅನ್ಯಾಯವಾಗಿದೆ. ರಾಜ್ಯ ಸರ್ಕಾರ ತುರ್ತಾಗಿ ಮರುಪಲಿಶೀಲನೆ ಮಾಡಬೇಕು. ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ಹೋರಾಟ ಖಚಿತ. ಈ ಗುಂಪಿನಲ್ಲಿ ಶೇಕಡ 5 ಕ್ಕೂ ಹೆಚ್ಚು ಮೀಸಲಾತಿ ನೀಡಬೇಕು. ಸರ್ಕಾರ ಏಕಾಏಕಿಯಾಗಿ ತರಾತುರಿಯಲ್ಲಿ ಮೀಸಲಾತಿ ಹಂಚಿಕೆ ಮಾಡಿರೋದು ಸರಿಯಲ್ಲ.

ಪ್ರತಿಭಟನೆ ಸಂದರ್ಭದಲ್ಲಿ ಸರ್ಕಾರಕ್ಕೆ ನೇರವಾಗಿ ನಾವು ಎಚ್ಚರಿಕೆ ನೀಡಿದ್ದು ಮೀಸಲಾತಿ ಹಂಚಿಕೆ ಸಂದರ್ಭದಲ್ಲಿ ಸರಿಯಾಗಿ ಪರಿಶೀಲನೆ ಮಾಡಿ ಮೀಸಲಾತಿ ಹಂಚಿಕೆ ನೀಡಬೇಕೆಂದು. ಆದ್ರೂ ಸರ್ಕಾರ ಇದರ ಬಗ್ಗೆ ಪರಿಶೀಲನೆ ಮಾಡದೆ ಹಂಚಿಕೆ ನೀಡಿದೆ. ಅತಿ ಹಿಂದುಳಿದ 64 ಜಾತಿ ಒಳಗೊಂಡ ಗುಂಪು ಇದ್ದು ಮೊದಲನೇ ಗುಂಪು ಎಂದು ಸ್ಥಾನಮಾನ ನೀಡಬೇಕು. ಆದ್ರೆ ತೀರ ತಳ ಸಮುದಾಯಗಳಿಗೆ ಅನ್ಯಾಯ ಮಾಡಿದ ಸರ್ಕಾರ. ತುರ್ತಾಗಿ ಸರ್ಕಾರ ಮೀಸಲಾತಿ ಹಂಚಿಕೆಯನ್ನು ಮರುಪರಿಶೀಲನೆ ಮಾಡಬೇಕು. ಒಂದು ವೇಳೆ ಮರುಪರಿಶೀಲನೆ ಮಾಡದೆ ಇದ್ದಲ್ಲಿ ಸರ್ಕಾರದ ವಿರುದ್ಧ ಹೋರಾಟ ಎಂದು ಪವನ್ ಕುಮಾರ್ ಶಿರ್ವ ಎಚ್ಚರಿಕೆಯಿಂದ ನೀಡಿದ್ದಾರೆ.