ಮಂಗಳೂರು : ಇಸ್ರೇಲ್ ಇರಾನ್ ಯುದ್ಧದಿಂದಾಗಿ ಮಂಗಳೂರು ಮತ್ತು ಗಲ್ಫ್ ಬಹುತೇಕ ರಾಷ್ಟ್ರ ಗಳೊಂದಿಗೆ ವಿಮಾನ ಸಂಚಾರ ರದ್ದುಗೊಂಡಿದ್ದರೂ ಮಂಗಳೂರು ಮತ್ತು ಮಸ್ಕತ್ ನಡುವಿನ ವಿಮಾನ ಯಾನ ಮುಂದುವರಿದಿದೆ.

ರವಿವಾರವೂ ನಿಗದಿಯಂತೆ ಮಂಗಳೂರಿನಿಂದ ಮಸ್ಕತ್‌ಗೆ ಹಾಗೂ ಮಸ್ಕತ್‌ನಿಂದ ಮಂಗಳೂರಿಗೆ ವಿಮಾನ ಸಂಚರಿಸಿದೆ. ಮಾ. 3ರಿಂದ ಪ್ರತಿ ಮಂಗಳವಾರ ಮತ್ತು ರವಿವಾರ ಮಂಗಳೂರು-ಮಸ್ಕತ್ ನಡುವೆ ವಿಮಾನ ಸಂಚಾರ ನಡೆಯುತ್ತಿದೆ.