ಮಂಗಳೂರು: ಗ್ರಾಹಕರೊಬ್ಬರು ಆನ್‌ ಲೈನ್‌ ಮುಖಾಂತರ ಖರೀದಿಸಿದ ಮೊಟ್ಟೆಯನ್ನು ಮನೆಯಲ್ಲಿ ಒಡೆದು ನೋಡಿದಾಗ ಅದರಲ್ಲಿ ಹುಳ ಇರುವುದನ್ನು ಗಮನಿಸಿ ಕೂಡಲೇ ವಿಷಯವನ್ನು ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರ ಗಮನಕ್ಕೆ ತಂದಿದ್ದರಿಂದ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕೈಗೊಂಡಿರುವ ಘಟನೆ ಗುರುವಾರ ನಗರದ ಫಲ್ನೀರ್‌ ನಲ್ಲಿ ನಡೆದಿದೆ.

ಘಟನೆ ಸಂಬಂಧ ಇಲ್ಲಿನ ಫಲ್ನೀರ್‌ ಸ್ಕ್ವೇರ್‌ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬ್ಲಿಂಕ್‌ ಇಟ್‌ ಆನ್ಲೈಲ್‌ ಮಾರಾಟ ಸಂಸ್ಥೆಯ ವಿರುದ್ಧ ದೂರು ದಾಖಲಿಸಿಕೊಂಡ ಆರೋಗ್ಯಾಧಿಕಾರಿಗಳು ಗೋದಾಮು ಪರಿಶೀಲಿಸಿ ಒಡೆದಿರುವ ಮೊಟ್ಟೆ ಇರುವ ಪ್ಯಾಕೆಟ್ಟುಗಳನ್ನು ಪತ್ತೆ ಹಚ್ಚಿದ್ದು, ತಕ್ಷಣವೇ ತೆರವುಗೊಳಿಸಲು ಸೂಚಿಸಿ ಗೋದಾಮಿಗೆ ಸೀಲ್‌ ಮಾಡಿಸಿರುತ್ತಾರೆ.