ಮಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಬ್ಯಾಪ್ಟಿಸ್ಟ್ ಬ್ಯಾಡ್ಮಿಂಟನ್‌ ಅಕಾಡೆಮಿ, ಉರ್ವಸ್ಟೋರ್ ಇವರ ಜಂಟಿ ಆಶ್ರಯದಲ್ಲಿ ಅಂತರ-ಶಾಲಾ ವಾಲಿಬಾಲ್ ಪಂದ್ಯಾಟ ರಾಜ್ಯೋತ್ಸವ ಕಪ್ 2026 ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಅನುದಾನಿತ ಹಾಗೂ ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟ ಹಾಗೂ ದಿ. ನಾಗೇಶ್ ಎ. ಚಿನ್ನರ ಕ್ರೀಡಾ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಅ.
31 ರಂದು ಬೆಳಗ್ಗೆ 10:00 ಗಂಟೆಗೆ ಮಂಗಳಾ ಕ್ರೀಡಾಂಗಣ, ಉರ್ವ ಮಂಗಳೂರಿನಲ್ಲಿ ನಡೆಯಲಿದೆ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರದೀಪ್ ಡಿಸೋಜ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಹಿಸಲಿದ್ದಾರೆ. ಪಂದ್ಯಾಟದ ಉದ್ಘಾಟನೆಯನ್ನು ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು ದ. ಕ. ಜಿಲ್ಲೆ ಲೋಕಸಭಾ ಕ್ಷೇತ್ರ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂತೋಷ್ ಕುಮಾರ್ ಶೆಟ್ಟಿ, ಅಧ್ಯಕ್ಷರು, ನಗರ ಅಭಿವೃದ್ಧಿ ಪ್ರಾಧಿಕಾರ, ಮಂಗಳೂರು, ಅನಿಲ್ ಲೋಬೊ, ಅಧ್ಯಕ್ಷರು, ಎಮ್‌ ಸಿ ಬ್ಯಾಂಕ್, ಚೇತನ್ ಮೆಂಡೋನ್ಸ, ಜನರಲ್ ಮ್ಯಾನೇಜರ್ ಪಾರದೀಪ್ ಫಾಸ್ಪೆಟ್ಸ್ ಲಿಮಿಟೆಡ್, ಈಶ್ವರ ಪ್ರಸಾದ್ ಶೆಟ್ಟಿ, ಯಥಾರ್ತ್ ಸೋಶಿಯಲ್, ಅರ್ಜುನ್ ಬಂಡಾರ್ಕರ್, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್, ವಿಷ್ಣು ನಾರಾಯಣ ಹೆಬ್ಬಾರ್, ದ.ಕ. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ, ಹರೀಶ್ ರೈ, ಅಧ್ಯಕ್ಷರು, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದ. ಕ, ರಮೇಶ್ ಶೆಟ್ಟಿ, ಅಧ್ಯಕ್ಷರು, ಮಂಗಳ ಫ್ರೆಂಡ್ಸ್ ಸರ್ಕಲ್, ಜಯರಾಜ್ ಸ್ಯಾಮುವೆಲ್, ಕ್ರಿಕೆಟ್ ತರಬೇತುದಾರರು, ವಿನೋದ್ ಪುತ್ರನ್, ಸುರತ್ಕಲ್ ಸ್ಪೋರ್ಟ್ ಕ್ಲಬ್ ಇವರುಗಳು ವಹಿಸಲಿದ್ದಾರೆ.

ಸಮರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ಸಂಜೆ 4:30 ಗಂಟೆಗೆ ನಡೆಯಲಿದೆ. ದಿವಾಕರ್, ಜನರಲ್ ಮ್ಯಾನೇಜರ್, ಕಾರಡೋಲೈಟ್ ಶಾಲಿ ಕೆಮಿಕಲ್ಸ್ ಲಿಮಿಟೆಡ್, ಸುನಿಲ್ ಬಾಳಿಗ, ಸಿ.ಎ.ಜಿ., ಇಂಡಿಯಾ ರಾಷ್ಟ್ರ ಮಟ್ಟದ ವಾಲಿಬಾಲ್ ಆಟಗಾರರು, ಐವನ್ ಡಿಸೋಜ, ಹಿರಿಯ ವಾಲಿಬಾಲ್ ಆಟಗಾರರು, ಪ್ರಸಾದ್ ಮರೋಳಿ, ಟ್ರಸ್ಟಿ, ಬೆಸೆಂಟ್ ಇವಿನಿಂಗ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ಸುಧೀರ್ ಕದ್ರಿ, ಟ್ರಸ್ಟಿ, ಬೆಸೆಂಟ್ ಇವಿನಿಂಗ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್, ಜಿನೀಶ್ ಅಬ್ರಹಾಂ, ಸ್ಟಾರ್ ಫಿನ್‌ಟೆಕ್, ರಾಕೇಶ್ ಡಿಸೋಜ, ಫಿನ್ನೋವೇಟಿವ್ ಸೊಲ್ಯೂಷನ್ಸ್ ಸಮರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.