ಮಂಗಳೂರು: ತಡರಾತ್ರಿ ಆಳ ಸಮುದ್ರದಲ್ಲಿ ಭಾರತೀಯ ತಟರಕ್ಷಕ ಪಡೆ ಮಹತ್ವ ಕಾರ್ಯಾಚರಣೆ ನಡೆಸಿ ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ ಮೀನುಗಾರನ ರಕ್ಷಣೆ ಮಾಡಲಾಯಿತು.
ಸಾವು ಬದುಕಿನ ಹೋರಾಟದಲ್ಲಿದ್ದ ಮೀನುಗಾರನ ರಕ್ಷಣೆ ಮಾಡಿ ಇಂಡಿಯನ್ ಕೋಸ್ಟ್ ಗಾರ್ಡ್ ಕರೆತಂದಿದೆ. ಮಂಗಳೂರಿನಿಂದ 54 ನಾಟಿಕಲ್ ಮೈಲ್ಸ್ ದೂರದ ಆಳ ಸಮುದ್ರದಲ್ಲಿ ಅಪಾಯದಲ್ಲಿ ಮೀನುಗಾರ ಇದ್ದರು. ಮಂಗಳೂರು ಮೀನುಗಾರಿಕಾ ದಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಶಿವ ಸಾಗರ್ ಹೆಸರಿನ ಟ್ರಾಲ್ ಬೋಟ್ ನಲ್ಲಿ ತಡರಾತ್ರಿ ಮೀನುಗಾರಿಕೆ ಸಂದರ್ಭ ಸಮುದ್ರಕ್ಕೆ ಬಿದ್ದು ಬಲೆಗೆ ಮೀನುಗಾರ ಸಿಲುಕಿಕೊಂಡಿದ್ದರು.
ಅಪಾಯದಲ್ಲಿದ್ದ ಮೀನುಗಾರನನ್ನು ಬೋಟ್ ನಲ್ಲಿದ್ದ ಇತರ ಮೀನುಗಾರರು ರಕ್ಷಿಸಿದ್ದಾರೆ. ಸಾವು ಬದುಕಿನ ನಡುವೆ ಮೀನುಗಾರ ರಾಮು ಹೋರಾಟದಲ್ಲಿದ್ದರು. ಮೀನುಗಾರಕಾ ಬೋಟ್ ನಿಂದ ತುರ್ತು ಸಂದೇಶವನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಿಸೀವ್ ಮಾಡಿದ್ದರು. ತಕ್ಷಣ ಇಂಡಿಯನ್ ಕೋಸ್ಟ್ ಗಾರ್ಡ್ ನ ಯೋಧರು ಕಾರ್ಯಾಚರಣೆ ನಡೆಸಿದರು.
ತಡರಾತ್ರಿ ಭಾರತೀಯ ತಟರಕ್ಷಣಾ ಪಡೆ ಕಾರ್ಯಾಚರಣೆ ನಡೆಸಿದರು. ಮೀನುಗಾರಿಕಾ ಬೋಟ್ ಪತ್ತೆಹಚ್ಚಿ ಅಪಾಯದಲ್ಲಿದ್ದ ಮೀನುಗಾರ ಹಾಗು ಬೋಟ್ ನಲ್ಲಿದ್ದ ಇತರ ಮೀನುಗಾರರನ್ನು ರಕ್ಷಣಡ ಮಾಡಲಾಯಿತು. ಅಪಾಯದಲ್ಲಿದ್ದ ಮೀನುಗಾರನನ್ನು ನವ ಮಂಗಳೂರು ಬಂದರಿಗೆ ಕರೆತಂದು ಇಂಡಿಯನ್ ಕೋಸ್ಟ್ ಗಾರ್ಡ್ ಯೋಧರು ಆಸ್ಪತ್ರೆಗೆ ದಾಖಲಿಸಿದರು.

