ಮಂಗಳೂರು: ನಿಮಗೆ ರೈಫಲ್ ಕೊಟ್ಟಿದ್ದೇಕೆಂದು ಬಹಿರಂಗವಾಗಿ ಪೊಲೀಸರಲ್ಲಿ ಕೇಳುವ ಯು.ಟಿ.ಖಾದರ್ ಅವರಿಗೆ ಧಮ್, ತಾಕತ್ ಎನ್ನುವುದಿದ್ದರೆ ಭರತ್ ಕುಮ್ಡೇಲು ಬಂದಾಗ ತಲೆಗೆ ಗುಂಡು ಹೊಡೆದು ಸಾಯಿಸಲು ಹೇಳಲಿ ಎಂದು ಯಂಗ್ ಡೆಮಾಕ್ರೆಟ್ ನ ರಾಜ್ಯಾಧ್ಯಕ್ಷ ಮೂನಿಶ್ ಅಲಿ ಸವಾಲು ಹಾಕಿದ್ದಾರೆ.

ಗುರುವಾರ ಮಂಗಳೂರಿನ ಎಸ್ ಡಿಪಿಐ ಕಚೇರಿಯಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರಿದ್ದಾರೆ.

ಹಸು ಸಾಗಾಟಗಾರರಿಗೆ ಕಾಲಿಗೆ ಅಲ್ಲ, ಎದೆಗೆ ಗುಂಡು ಹೊಡೆಯಿರಿ ಎಂದು ಪುತ್ತೂರಿನ ಶಾಶಕ ಅಶೋಕ್ ರೈ ಹೇಳಿದರೆ, ಪೊಲೀಸರಿಗೆ ರೈಫಲ್ ಇರುವುದು ಯಾಕೆಂದು ಯು.ಟಿ.ಖಾದರ್ ಕೇಳ್ತಾರೆ. ಅವರಿಗೆ ತಾಕತ್ತು, ಧಮ್ ಇದ್ದರೆ ಭರತ್ ಕುಮ್ಡೇಲು, ಸಮಾಜದಲ್ಲಿ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾದವರ ತಲೆಗೆ ಗುಂಡು ಹೊಡೆದು ಸಾಯಿಸಲು ಹೇಳಲಿ ಎಂದರು.‌