ಮಂಗಳೂರು: ಪ್ರಧಾನಿ ಮೋದಿ 75 ನೇ ವರ್ಷದ ಸಂಭ್ರಮಾಚರಣೆಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ದ.ಕ ಯೂತ್ ಕಾಂಗ್ರೆಸ್ ನಿಂದ ವಿಭಿನ್ನ ‌ಪ್ರತಿಭಟನೆ ನಡೆಸಲಾಯಿತು.

ಮೋದಿ ಆಡಳಿತದಲ್ಲಿ ನಿರುದ್ಯೋಗ ಹೆಚ್ಚಳವಾಗಿದೆ. ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕ್ಲಾಕ್ ಟವರ್ ಮುಂದೆ ಪ್ರತಿಭಟನೆ ನಡೆಸಿದರು.

ವಿಭಿನ್ನ ಪ್ರತಿಭಟನೆಯಲ್ಲಿ ಪಕೋಡಾ, ಬಜ್ಜಿ ಸವಿದ ಸಚಿವ ಹೆಚ್ ಸಿ ಬಾಲಕೃಷ್ಣ ಭಾಗವಹಿಸಿದರು. ದ.ಕ ಯೂತ್ ಕಾಂಗ್ರೆಸ್ ಅಧ್ಯಕ್ಷ ನವಾಜ್ ಇಬ್ರಾಹಿಂ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.