ಮಂಗಳೂರು : ಚಿಕ್ಕಮಗಳೂರಿನಲ್ಲಿ ಹಿಂದೂ ಮನೆ ಮೇಲೆ ಕಲ್ಲು ತೂರಾಟ ಘಟನೆ ವಿಚಾರ‌ವಾಗಿ ಮಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮಗಳೂರು ಘಟನೆ ಸಂಬಂಧ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಪ್ರಕಾರ ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತಾರೆ. ಹೆಣ್ಣು ಮಗಳು ದಲಿತ ಸಮುದಾಯಕ್ಕೆ ಸೇರಿದವರು ಅಂತಾ ಗೊತ್ತಾಗಿದೆ. ಆ ಪ್ರಕಾರ ಪೊಲೀಸರು ಪಿಸಿಆರ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸುತ್ತಾರೆ ಎಂದರು.

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸ ವಿಚಾರವಾಗಿ ಪ್ರತಿಕ್ರಿಯೆ ಅವರು ಯಾಕೆ ಹೋಗ್ತಿದ್ದಾರೆ ಅಂತಾ ಗೊತ್ತಿಲ್ಲ. ಅವರ ಹಣದಲ್ಲಿ ಅವರು ಎಲ್ಲಿ ಬೇಕಾದರೂ ಹೋಗಬಹುದು. ಆಸ್ಟ್ರೇಲಿಯಾ ಸೇರಿದಂತೆ ಎಲ್ಲಾ ಕಡೆ ಕೃಷಿ ಇದೆ. ಬಜೆಟ್ ನಲ್ಲಿ ಅವರಿಗೆ ಕೆಲಸ ಇಲ್ಲ. ಬಜೆಟ್ ತಯಾರು ಮಾಡೋದು ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆಯವರು. ಸಿಎಲ್ ಪಿ ಸಭೆಯಲ್ಲಿ ಬಜೆಟ್ ಕುರಿತು ಅವರ ಅನಿಸಿಕೆಗಳನ್ನು ಹೇಳಿದ್ದಾರೆ.

ಇದೆಲ್ಲವನ್ನೂ ಕ್ರೋಡೀಕರಿಸಿ ಬಜೆಟ್ ತಯಾರು ಮಾಡುತ್ತಾರೆ. ಶಾಸಕರು ಎಲ್ಲಿ ಬೇಕಾದರೆ ಹೋಗ್ತಾರೆ ಬರ್ತಾರೆ. ನಮ್ಮಲ್ಲಿ ಯಾವ ಕದನವೂ ಇಲ್ಲ. ಪ್ರಿಯಾಂಕ ಖರ್ಗೆ ಆರ್ ಎಸ್ ಎಸ್ ಕುರಿತು ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಆರ್ ಎಸ್ ಎಸ್ ಕುರಿತು ನನಗೆ ನನ್ನದೇ ಅಭಿಪ್ರಾಯವಿದೆ. ಪ್ರಿಯಾಂಕ ಖರ್ಗೆ ಅವರದೇ ಆದ ಅಭಿಪ್ರಾಯವನ್ನು ಹೇಳಿದ್ದಾರೆ. ಅವರ ಅಭಿಪ್ರಾಯಕ್ಕೆ ನನ್ನ ಹೇಳಿಕೆ ಅಗತ್ಯವಿಲ್ಲ ಎಂದರು.

ಎಚ್.ಸಿ ಮಹದೇವಪ್ಪ ದಲಿತ ಸಿ.ಎಂ ಹೇಳಿಕೆ ವಿಚಾರವಾಗಿ ಯಾವುದೇ ಜವಬ್ದಾರಿ ಕೊಟ್ಟರು ತೆಗೆದುಕೊಳ್ಳುವುದಕ್ಕೆ ಅವರಿಗೆ ಸಾಮರ್ಥ್ಯ ಇದೆ. ಅದಕ್ಕೆ ಅವರು ಹೇಳಿದ್ದಾರೆ. ಜನಸಮುದಾಯದಲ್ಲಿ ಕೆಲವರು ಅವರವರ ಲೀಡರ್ ಅಂತಾ ಆರಿಸಿಕೊಳ್ಳುತ್ತಾರೆ.

ಜನ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅದನ್ನು ತಪ್ಪು ಅಂತಾ ನಾವು ಹೇಳುವುದಕ್ಕೆ ಆಗಲ್ಲ. ಅವರ ಅಭಿಪ್ರಾಯ ಅದು. ನಮ್ಮಲ್ಲಿ ಒಂದು ವ್ಯವಸ್ಥೆ ಇದೆ, ಹೈಕಮಾಂಡ್ ಇದೆ, ಸಂದರ್ಭ ಇದೆ. ಹೈಕಮಾಂಡ್ ಆ ಬಗ್ಗೆ ತೀರ್ಮಾನ ಮಾಡ್ತಾರೆ‌. ಯಾರೋ ಹತ್ತು ಜನ ನನ್ನ ಪರವಾಗಿ ಜೈಕಾರ ಹಾಕಿದ್ರೆ ಆಗಲ್ಲ. ಆದ್ರೆ ಹೈಕಮಾಂಡ್ ನವರು ಅದನ್ನೆಲ್ಲಾ ನೋಡಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗ ಆ ಸಂದರ್ಭ ಇದೆ ಅಂತಾ ನನಗೆ ಅನಿಸಲ್ಲ. ಈಗ ದಲಿತ ಸಿ.ಎಂ ಎಂಬ ಚರ್ಚೆಯೆ ಇಲ್ಲ. ನಾವು ಆಡಳಿತದ ಮೇಲೆ ನಿಗಾ ಇರಿಸಿದ್ದೇವೆ ಎಂದರು.