ಮಂಗಳೂರು: ರಾಹುಲ್ ಗಾಂಧಿ ಅವರಿಗೆ ಬಕೆಟ್ ಹಿಡಿಯುವ ಮೂಲಕ ಒಳ್ಳೆಯ ಸ್ಥಾನಮಾನ ಪಡೆಯಲು ಸಚಿವ ಪ್ರಿಯಾಂಕ್ ಖರ್ಗೆ ಇಂಥ ಕೀಳು ಹೇಳಿಕೆ ನೀಡುತ್ತಿದ್ದಾರೆ. ಆರೆಸ್ಸೆಸ್, ಬಿಜೆಪಿ ಕುರಿತಾದ ತಮ್ಮ ಬೇಜವಾಬ್ದಾರಿ ಹೇಳಿಕೆ ಬಗ್ಗೆ ಕೂಡಲೆ ಅವರು ಕ್ಷಮೆ ಕೇಳಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.
ಕೋಮುವಾದಿ ಎಂಬ ಬಗ್ಗೆ ಅವರು ಸ್ಪಷ್ಟವಾದ ವ್ಯಾಖ್ಯಾನ ನೀಡಲಿ. ದ.ಕ. ಅಭಿವೃದ್ಧಿಗೆ ಅವರ ಯಾವುದೇ ಕೊಡುಗೆ ಇಲ್ಲ. ಇಲ್ಲಿನ ಐಟಿ ಪಾರ್ಕ್‌ಗೆ ಇನ್ನೂ ಸರಿಯಾದ ಟೆಂಡರ್ ಡಾಕ್ಯುಮೆಂಟ್ ಮಾಡಲು ಸಾಧ್ಯವಾಗಿಲ್ಲ. ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಲ್ಲಿ ದೊಡ್ಡ ಮಾಫಿಯಾವೇ ಇದ್ದು, ಈ ಕುರಿತು ಮುಂದೆ ವಿವರ ತಿಳಿಸುವುದಾಗಿ ಹೇಳಿದರು.
ಆರೆಸ್ಸೆಸ್‌ನ ಹಣದ ಮೂಲದಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಪ್ರಿಯಾಂಕ್ ಖರ್ಗೆ ಅವರಿಗೆ ಆಗದಿದ್ದರೆ ನ್ಯಾಯಾಲಯಕ್ಕೆ ಹೋಗಲಿ ಎಂದು ಭರತ್ ಶೆಟ್ಟಿ ಸವಾಲೊಡ್ಡಿದರು.

