ಮಂಗಳೂರು: ದೈವ ಪಾತ್ರಿ ಸುಶಾಂತ್ ಬಂಗೇರ ಅವರ ಧರ್ಮದ ಕುರಿತು ಸಂಶೋಧಕಿ ರತಿ ಮಾಡಿರುವ ಆರೋಪಕ್ಕೆ ಈಗ ಸುಶಾಂತ್ ಅವರ ತಾಯಿ ಸವಿತಾ ಅವರು ಖಡಕ್ ಉತ್ತರ ನೀಡಿದ್ದಾರೆ.
“ನನ್ನ ಮಗ ಕ್ರಿಶ್ಚಿಯನ್ ಅನ್ನೋದಕ್ಕೆ ರತಿ ಮೊದಲು ದಾಖಲೆ ನೀಡಲಿ. ನಮ್ಮ ಮಕ್ಕಳ ಜಾತಿ ಪ್ರಮಾಣಪತ್ರದಲ್ಲಿ ‘ಪಂಪದ’ ಎಂದೇ ಇದೆ. ನಮ್ಮ ಜಾತಿಯ ಬಗ್ಗೆ ಮಾತನಾಡುವ ರತಿ ಅವರು ನಮ್ಮ ಜಾತಿ ಕೂಟಕ್ಕೆ ಎಂದಾದರೂ ಬಂದಿದ್ದಾರೆಯೇ?” ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಪಂಪದ ಜಾತಿಯ ಜನರಿಗೆ ರತಿ ಎಂದರೆ ಯಾರೆಂದೇ ಗೊತ್ತಿಲ್ಲ ಮತ್ತು ಅವರು ಅನಾವಶ್ಯಕವಾಗಿ ನಮ್ಮ ಕಸುಬಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗನ ಮೇಲಿನ ಮಾಟ-ಮಂತ್ರದ ಆರೋಪವನ್ನು ತಳ್ಳಿಹಾಕಿರುವ ಅವರು, ತಮ್ಮ ಮಗ ಕೇವಲ ಮಂತ್ರ ದೇವತೆಯನ್ನು ಪೂಜಿಸುತ್ತಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ.

