ಮಂಗಳೂರು: ಕರಾವಳಿಯ ದೈವಾರಾಧನಾ ಪರಂಪರೆಯಲ್ಲಿ ಜಾತೀಯತೆ ಮತ್ತು ಧರ್ಮದ ಕುರಿತಾದ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ದೈವ ಪಾತ್ರಿ ಸುಶಾಂತ್ ಬಂಗೇರ ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು ಮತ್ತು ಅವರಿಂದ ದೈವ ನರ್ತನ ಸೇವೆ ನಡೆಸಿರುವುದು ದೈವಾರಾಧನಾ ಪರಂಪರೆಗೆ ಮಾಡಿದ ಘೋರ ಅಪಚಾರ ಎಂದು ಸಂಶೋಧಕಿ ರತಿ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
ಈ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸುಶಾಂತ್ ಬಂಗೇರ, “ನಾನು ಪಂಪದ ಜಾತಿಗೆ ಸೇರಿದವನು ಎಂಬ ದಾಖಲೆ ನನ್ನಲ್ಲಿದೆ. ರತಿಯವರು ನಾನು ಕ್ರೈಸ್ತ ಎಂದು ದಾಖಲೆ ತೋರಿಸಲಿ” ಎಂದು ಸವಾಲು ಹಾಕಿದ್ದಾರೆ.
ಅಲ್ಲದೆ, ತಮ್ಮ ಮೇಲೆ ಹೊರಿಸಲಾದ ಮಾಟ-ಮಂತ್ರದ ಆರೋಪವನ್ನೂ ನಿರಾಕರಿಸಿರುವ ಅವರು, ತಂದೆಯ ಕಾಲದಿಂದ ಬಂದ ಮಂತ್ರ ದೇವತೆಯ ಪೂಜೆಯನ್ನು ಮುಂದುವರಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

