ಪುತ್ತೂರು : ನಗರದ ಮಧ್ಯೆ ಇರುವ ಸರಕಾರಿ ಮಹಿಳಾ ಪದವಿ ಕಾಲೇಜಿಗೆ ಆಸ್ಪತ್ರೆ ಕಾಮಗಾರಿ ಹಿನ್ನೆಲೆ ತರಗತಿಗಳಲ್ಲಿ ಧೂಳು ತುಂಬಿಕೊಂಡಿದ್ದು, ಈ ಹಿನ್ನೆಲೆ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಿಸುವಂತಾಗಿದೆ. ಹಲವು ಬಾರಿ ಹೊಸ ಕಟ್ಟಡಕ್ಕೆ ಮಹಿಳಾ ಕಾಲೇಜನ್ನ ಸ್ಥಳಾಂತರಗೊಳಿಸಲು ಮನವಿಯನ್ನು ಪ್ರಾಂಶುಪಾಲರು ನೀಡಿದ್ದಾರೆ. ಹಾಗಿದ್ರೂ ತಗರತಿಗಳಲ್ಲಿ ಧೂಳಿನಲ್ಲೇ ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಿದ್ದಾರೆ.
ತರಗತಿಯಲ್ಲಿ ವಿಪರೀತ ಧೂಳು ಇದ್ದ ಪರಿಣಾಮ ವಿದ್ಯಾರ್ಥಿನಿಯರು ರೊಚ್ಚಿಗೆದ್ದು ರಸ್ತೆಗಿಳಿದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಆಗಮಿಸಿದರು. ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿರುವುದರ ಬಗ್ಗೆ ಪ್ರಾಂಶುಪಾಲರಲ್ಲಿ ಶಾಸಕ ವಾಗ್ವಾದ ನಡೆಸಿದರು. ಈ ವೇಳೆ ಕಾಲೇಜು ಪ್ರಿನ್ಸಿಪಾಲ್ ರಿಂದಲೇ ಶಾಸಕ ಅಶೋಕ್ ಕುಮಾರ್ ರೈಗೆ ಕ್ಲಾಸ್ ತೆಗೆದುಕೊಳ್ಳಲಾಯಿತು.
ವಿಷಯದ ಗಂಭೀರತೆ ಅರಿಯದೆ ಆಪಾದನೆ ಮಾಡಿದ ಶಾಸಕರ ವಿರುದ್ಧ ಪ್ರಾಂಶುಪಾಲರು ಗರಂ ಆದರು. ಕಾಮಗಾರಿ ನಡೆಯುತ್ತಿರುವಾಗ ಧೂಳು ಬರುತ್ತೆ ಅನ್ನೋ ಕಾಮನ್ ಸೆನ್ಸ್ ಬೇಕು. ಶಾಸಕರಿಗೆ ಏರು ಧ್ವನಿಯಲ್ಲೇ ಪ್ರಾಂಶುಪಾಲೆ ವೇದಶ್ರೀ ನಿತ್ಯಾ ಉತ್ತರ ನೀಡಿದರು.
ಹಲವು ಬಾರಿ ನಿಮ್ಮಲ್ಲಿಗೆ ಬಂದು ಮನವಿ ನೀಡಿದ್ದೇನೆ. ಇಲ್ಲೀವರೆಗೂ ಮಹಿಳಾ ಕಾಲೇಜಿನ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಿಲ್ಲ. ಶಾಸಕ ಅಶೋಕ್ ರೈಗೆ ಪ್ರಾಂಶುಪಾಲೆ ಫುಲ್ ಕ್ಲಾಸ್ ತೆಗೆದುಕೊಂಡರು. ಪ್ರಾಂಶುಪಾಲರ ಮಾತಿಗೆ ಅಶೋಕ್ ರೈ ತಬ್ಬಿಬ್ಬಾದರು.

