ಮಂಗಳೂರು: ಇತಿಹಾಸ ಪ್ರಸಿದ್ಧ ಕದ್ರಿ ದೇವಸ್ಥಾನಕ್ಕೆ ಸಿಎಂ ಡಿಕೆಶಿ ಆಗಮಿಸಿದರು. ಸಿಎಂ ಗೆ ದೇವಸ್ಥಾನದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ವಿವಿಧ ಕಲಾತಂಡದಿಂದ ಸಿಎಂಗೆ ಭವ್ಯ ಸ್ವಾಗತ ಮಾಡಿದರು.

ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಸಂಪುಟ ಸಚಿವರು ಹಾಜರಾದರು. ಸಿಎಂ ಡಿಕೆಶಿ ಪರವಾಗಿ ಮಂಜುನಾಥ ಸ್ವಾಮಿಗೆ ರುದ್ರಾಭಿಷೇಕ ಮಾಡಲಾಯಿತು. ಮಧ್ಯಾಹ್ನ ದ ಅನ್ನದಾನ ಸೇವೆಯನ್ನು ಡಿಕೆ ಶಿವಕುಮಾರ್ ನೀಡಿದರು.