ಮಂಗಳೂರು: ಭಟ್ಕಳದಲ್ಲಿ ಮಸೀದಿಗೆ ಕಲ್ಲು ತೂರಾಟ ವಿಚಾರವಾಗಿ ಮಂಗಳೂರಿನಲ್ಲಿ ಆರೋಗ್ಯ ಸಚಿವ ಯು ಟಿ ಖಾದರ್ ಹೇಳಿಕೆ ನೀಡಿದ್ದಾರೆ.
ನಮ್ಮ ಜನ ಶಾಂತಿ ಪ್ರೀತಿ ನೆಮ್ಮದಿಯಿಂದ ಜೀವನ ಮಾಡುತ್ತಾರೆ. ಬಹುತೇಕ ಎಲ್ಲಾ ಧಾರ್ಮಿಕ ಕಾರ್ಯಕ್ರಮಕ್ಕೆ ಎಲ್ಲಾ ಜಾತಿ ಧರ್ಮದವರು ಸೇರುತ್ತಾರೆ. ಕೆಲವೊಮ್ಮೆ ಯಾರು ಇಂತಹ ಕೃತ್ಯ ನಡೆಸುತ್ತಾರೆ ಗೊತ್ತಾಗೋದಿಲ್ಲ. ಕಿಡಿಗೇಡಿಗಳನ್ನ ಪತ್ತೆ ಹಚ್ಚಿ ಕಠಿಣ ಕ್ರಮವನ್ನ ಕೈಗೊಳ್ಳುತ್ತಾರೆ ಎಂದರು.
ಕೋಮು ಗಲಭೆ ಮಾಡುವವರು ಅವರು ಯಾವ ಜಾತಿ ಧರ್ಮಕ್ಕು ಸೇರಿದವರಲ್ಲ. ಅವರು ಸಮಾಜದ ವ್ಯವಸ್ಥೆಯಿಂದ ಹೊರಗಿರುವವರು ಎಂದರು.

