ಮಂಗಳೂರು: 2025-2026 ರ ಅವಧಿಗೆ ಈ ಕೆಳಗಿನ ಮಹನೀಯರು ಪದಾಧಿಕಾರಿಗಳಾಗಿ ಆಯ್ಕೆಗೊಂಡರು. ಮಹಾಪೋಷಕರರು ಸಿಎ ಎಸ್.ಎಸ್ .ನಾಯಕ್ , ಹಿರಿಯ ಲೆಕ್ಕ ಪರಿಶೋಧಕರು , ಎಂ.ಎಸ್.ಎಂ.ಇ & ಸ್ಟಾರ್ಟ್ ಅಪ್ ಮಾರ್ಗದರ್ಶಕರು ಹಾಗೂ ಬಿಸಿನೆಸ್ ಕೋಚ್ , ಅಧ್ಯಕ್ಷರಾಗಿ ಯು . ರಾಮರಾವ್ ,
ಉಪಾಧ್ಯಕ್ಷರಾಗಿ S G ಹೆಗ್ಡೆ ನಿವೃತ್ತ ಜಂಟಿ ನಿರ್ದೇಶಕರು ( ಕೈಗಾರಿಕೆ ), ಕರ್ನಾಟಕ ಸರಕಾರ , ಕಾರ್ಯದರ್ಶಿಯಾಗಿ ಡಾ . ಪಿ.ಜಿ.ಮಹೇಶ್ , ಸಹಾಯಕ ಪ್ರಾಧ್ಯಾಪಕರು , ಎ.ಜೆ.ಇನ್ಸ್ಟಿಟ್ಯೂಟ್ ಆಪ್ ಮ್ಯಾನೇಜ್ಮೆಂಟ್ ,ಜೊತೆ ಕಾರ್ಯದರ್ಶಿಯಾಗಿ ರಘುರಾಮ್ ನಿವೃತ್ತ ಮಹಾ ಪ್ರಬಂಧಕರು , ಕರ್ಣಾಟಕ ಬ್ಯಾಂಕ್ , ಖಜಾಂಜಿಯಾಗಿ ಜಿ.ಗೋವಿಂದರಾಯ ಪ್ರಭು ನಿವೃತ್ತ ಪ್ರಬಂಧಕರು , ಕರ್ಣಾಟಕ ಬ್ಯಾಂಕ್ .
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಶಿಧರ ಕೆ. ಮೊೈಲಿ, ಮಧುಸೂಧನ್ ಭಂಡಾರ್ ಕರ್ , ಪಿ.ಕಾಶಿನಾಥ್ , ಕೆ.ಜಿ.ರಮೇಶ್ ರಾವ್ , ಎ. ಚಂದ್ರಶೇಖರ ಮಯ್ಯ ಆಯ್ಕೆಯಾಗಿದ್ದಾರೆ .
ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ 1960 ರಲ್ಲಿ ಸ್ಥಾಪಿತಗೊಂಡಿದೆ . ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್ ನೊಂದಿಗೆ ಸಂಯೋಜನೆಗೊಂಡಿರುತ್ತದೆ . ಜಿ ಎಸ್ ಟಿ, ಯೂನಿಯನ್ ಬಜೆಟ್ , ಹೂಡಿಕೆ , ಆರೋಗ್ಯ , ಎಂ.ಎಸ್.ಎಂ.ಇ, ಬ್ಯಾಂಕಿಂಗ್ ಇತ್ಯಾದಿ ವಿಷಯಗಳ ಬಗ್ಗೆ ನಿರಂತರವಾಗಿ ಉಪನ್ಯಾಸ ಏರ್ಪಡಿಸುತ್ತಾ ಇದೆ .

