ನವದೆಹಲಿ: ಭಾರತ-ಯುರೋಪ್‌ ಒಕ್ಕೂಟವು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಂಗಳವಾರ ಅಧಿಕೃತವಾಗಿ ಸಹಿ ಹಾಕಿವೆ.

ಅಂತರರಾಷ್ಟ್ರೀಯ ಗಮನವನ್ನು ಸೆಳೆಯುತ್ತಿರುವ ಈ ಒಪ್ಪಂದ ಎರಡು ಶತಕೋಟಿ ಜನರ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ. ಜಾಗತಿಕ GDP (GDP) ಒಟ್ಟು ದೇಶೀಯ ಉತ್ಪನ್ನದ ಸುಮಾರು ಕಾಲು ಭಾಗದಷ್ಟು ಪಾಲನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ವ್ಯಾಪಾರ ಒಪ್ಪಂದವು ಭಾರತಕ್ಕೆ ಪ್ರವೇಶಿಸುವ ಯುರೋಪಿಯನ್ ಒಕ್ಕೂಟದ ರಫ್ತಿನ ಸುಮಾರು ಶೇ. 97 ರಷ್ಟು ಮೇಲಿನ ಸುಂಕವನ್ನು ಕಡಿತಗೊಳಿಸುತ್ತದೆ. ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಹಿ ಹಾಕಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೃಢಪಡಿಸಿದ್ದಾರೆ. ಈ ಬೆಳವಣಿಗೆಯು ಅಮೆರಿಕವನ್ನು ಕೆರಳಿಸಿದಂತೆ ಕಂಡುಬಂದಿದೆ.

ಇದು ಯುರೋಪಿಯನ್ ಒಕ್ಕೂಟ ಮತ್ತು ಭಾರತ ಎರಡೂ ಇದುವರೆಗೆ ಮಾಡಿಕೊಂಡಿರುವ ಅತಿದೊಡ್ಡ ವ್ಯಾಪಾರ ಒಪ್ಪಂದವಾಗಿದೆ. 2022ರ ಜೂನ್‌ನಲ್ಲಿ ಒಪ್ಪಂದದ ಮಾತುಕತೆ ನಡೆಸಲಾಗಿತ್ತು. ಸುಮಾರು ಒಂಬತ್ತು ವರ್ಷಗಳ ವಿರಾಮದ ನಂತರ ಮಾತುಕತೆ ಪುನರಾರಂಭಗೊಂಡು ಇಂದು ಘೋಷಣೆ ಮಾಡಲಾಗಿದೆ.