ಮಂಗಳೂರು: ಧನುರ್ಮಾಸ ಪೂಜೆಗೆ ಮುಂಜಾನೆ ತೆರಳಿದ್ದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಕುವೆಟ್ಟು ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15) ಸಾವು. ಮುಂಜಾನೆ 4 ಗಂಟೆಗೆ ಪೂಜೆಗೆಂದು ಬಾಲಕ ದೇವಸ್ಥಾನಕ್ಕೆ ತೆರಳಿದ್ದನು. ಮನೆಗೆ ವಾಪಾಸ್ ಬರದಾಗ ಪೋಷಕರು ವಿಚಾರಿಸಿದರು.
ದೇವಸ್ಥಾನಕ್ಕೆ ಬಂದಿಲ್ಲ ಎಂದು ಮಾಹಿತಿ ಹಿನ್ನಲೆ ಹುಡುಕಾಟ ನಡೆಸಿದರು.

ಮನೆಗೆ ಬರೋ ದಾರಿಯಲ್ಲಿ ಹುಡುಕಾಟದ ವೇಳೆ ರಕ್ತ ಚಲ್ಲಿರೋದು ಪತ್ತೆಯಾಗಿದೆ. ಬಳಿಕ ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಹುಡುಕಾಟ ನಡೆಸಿದರು.ಹುಡುಕಾಡಿದಾಗ ಕೆರೆಯಲ್ಲಿ ಸುಮಂತ್ ಶವ ಪತ್ತೆಯಾಗಿದೆ.

ತಲೆಯಲ್ಲಿ ಗಾಯಗೊಂಡಿರೊ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಬೆಳ್ತಂಗಡಿ ಪೊಲೀಸರು, ಬೆಳ್ತಂಗಡಿ ತಹಶೀಲ್ದಾರ್ ಸ್ಥಳಕ್ಕೆ ದೌಡಾಯಿಸಿದ್ದಾರೆ.

