ಮಂಗಳೂರು : ಉರ್ವಾ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಆರೋಪಿಯಾಗಿದ್ದ, ಸುಹಾನ್ @ ಸೋನು (33) ತಂದೆ: ದಿ ಸೋಮಯ್ಯ ವಾಸ: ಬಿರಾ ಪೂಜಾರಿ ಕಂಪೌಂಡ್, ಅಶೋಕ ನಗರ ಮಂಗಳೂರು ಈತನು ಘನ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದು, ಆತನ ವಿರುದ್ದ ಉರ್ವಾ ಪೊಲೀಸ್ ಠಾಣಾ ಪ್ರಕರಣದಲ್ಲಿ ಘನ ನ್ಯಾಯಾಲವವು LPC ವಾರಂಟ್ ಹೊರಡಿಸಿರುತ್ತದೆ.
ಈತನನ್ನು ದಿನಾಂಕ 29.03.2026 ರಂದು ಮುಂಬಯಿಯಲ್ಲಿ ಉರ್ವಾ ಪೊಲೀಸ್ ಠಾಣಾ ಎಎಸ್ಐ ಲಕ್ಷ್ಮಣ್, ಹೆಚ್.ಸಿ 956 ನಾರಾಯಣ, ಪಿಸಿ 3240 ಯಲ್ಲಾಲಿಂಗ, ಪಿಸಿ 330 ಮೊಹಮ್ಮದ್ ಹದಿಯ ವರುಗಳು ದಸ್ತಗಿರಿ ಮಾಡಿದ್ದು, ನ್ಯಾಯಾಲಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

