ಕೇರಳ: ಪ್ರಸಿದ್ಧ ಪ್ರವಾಸಿ ತಾಣವಾದ ಮರಯೂರ್ ಪಟ್ಟಣದ ಹೃದಯಭಾಗದಲ್ಲಿ ಕಾಡುಕೋಣವೊಂದು ನುಗ್ಗಿ ಭೀಕರ ಆತಂಕ ಸೃಷ್ಟಿಸಿದೆ. ಜನದಟ್ಟಣೆ ಇರುವ ಪ್ರದೇಶದಲ್ಲಿ ಏಕಾಏಕಿ ಕಾಣಿಸಿಕೊಂಡ ಕಾಡುಕೋಣವನ್ನು ಕಂಡು ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರು ಅದನ್ನು ಕಾಡಿಗಟ್ಟಲು ಪ್ರಯತ್ನಿಸುತ್ತಿದ್ದಂತೆ, ಬೆದರಿದ ಕಾಡುಕೋಣ ಅತಿವೇಗವಾಗಿ ನಾಗರಿಕರ ಮೇಲೆ ಎರಗಿದೆ. ಸದ್ಯ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಮರಯೂರ್ ಸುತ್ತಮುತ್ತಲಿನ ಕಾಡುಗಳಿಂದ ಪ್ರಾಣಿಗಳು ನಾಡಿಗೆ ಬರುವುದು ಇತ್ತೀಚೆಗೆ ಹೆಚ್ಚಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಜನರು ಒತ್ತಾಯಿಸಿದ್ದಾರೆ.

