ಮಂಗಳೂರು: ಬಾಂಗ್ಲಾದೇಶದಲ್ಲಿ ದಡಾರ ರೋಗ ಕಂಡುಬಂದಿದ್ದು, ಇದರು ಹೆಚ್ಚಾಗಿ ಮಕ್ಕಳಲ್ಲಿ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹರಡುತ್ತಿದ್ದು, ಪ್ರತಿಯೊಬ್ಬರೂ ಜಾಗೃತರಾಗಬೇಕು. ದಡಾರ ಹಾಗೂ ರುಬೆಲ್ಲಾ ಲಸಿಕೆಯನ್ನು ೯ ತಿಂಗಳ ಮಗುವಿಗೆ ಹಾಗೂ ೧೬ ತಿಂಗಳ ಮಗುವಿಗೆ ಎರಡು ಹಂತದಲ್ಲಿ ನೀಡುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಹಾಕಿಸಬೇಕು ಎಂದು ಡಿಹೆಚ್‌ಒ ಮನವಿ ಮಾಡಿದರು.

ದಡಾರ ಸೋಂಕು ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಸೆಯನ್ನು ಉಂಟುಮಾಡುತ್ತದೆ. ರುಬೆಲ್ಲಾ ಸೋಂಕು ಗರ್ಭಕೋಶದ ಮೇಲೆ ಪ್ರಭಾವ ಬೀರುತ್ತಿದ್ದು, ಬಹು ಅಂಗವಿಕಲತೆ ಮಾಡುತ್ತದೆ ಎಂದು ತಿಳಿಸಿದರು.