ಮಂಗಳೂರು : ವಿತ್ತೀಯ ಕೊರತೆ ಇದ್ರು ಸಚಿವ ಸಂಪುಟದಲ್ಲಿ ಬರಪೂರ ಘೋಷಣೆ ಆರೋಪ ಕೇಳಿಬಂದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯಿಂದ ಮಂಗಳೂರಿನ ಮಿನಿ ವಿಧಾನಸೌಧ ಬಳಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಭಾಗಿಯಾದರು. ಖಾಲಿ ಪಾತ್ರೆ ಹಿಡಿದು ಪ್ರತಿಭಟನೆ ನಡೆಸಲಾಯಿತು. ಕಿವಿಗೆ ಹೂ, ಕೈಯಲ್ಲಿ ಚಂಬು ಹಿಡಿದಿರೋ ಸಿಎಂ ಪೋಟೊ ಹಿಡಿದು ವಿರೋಧ ವ್ಯಕ್ತಪಡಿಸಿದರು. ಶಾಸಕ ಭರತ್ ರಾಜ್ ಶೆಟ್ಟಿ ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರಕಾರ ರಿಯಲ್ ಎಸ್ಟೇಟ್ ಸರಕಾರ. ಇವರ ಲೆಫ್ಟ್ ಹ್ಯಾಂಡ್ ರೈಟ್ ಹ್ಯಾಂಡ್ i land ಖರೀದಿ ಮಾಡ್ತಾಇದ್ದಾರೆ. A , R , B ಅಕ್ಷರಗಳಿಂದ ಶುರುವಾಗುವ ಬೈಗುಳ ನಾನು ಹೇಳದೆ ಹೇಳಿದೆ. ನಾಚಿಗೆ ಮನ ಮರಿಯಾದೆ ಬಿಟ್ಟವರಿಗೆ ಎಷ್ಟು ಬೈದರು ಖುಷಿ ಆಗತ್ತೆ. ನೀವು ಅಂಜಲ್ ಮೀನು ತಿನ್ನಲು 15 ಕೋಟಿ ಖರ್ಚು ಮಾಡ್ಬೇಕಾ, ನಿಮಗೆ ಅಂಜಲ್ ಮೀನು ಬೇಕಾದ್ರೆ ಹೇಳಿ ನಾವು ಕಳಿಸಿ ಕೊಡ್ತೇವೆ ಎಂದು ವ್ಯಂಗ್ಯ ಮಾಡಿದರು.