ಮಂಗಳೂರು : ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ವಿರುದ್ಧ ಕಾರ್ಯಕರ್ತರು ಗರಂ ಆಗಿದ್ದಾರೆ. ‘ಇಂಥವರು ನಮ್ಮ ಜನಪ್ರತಿನಿಧಿಯಾಗಿದ್ದು ನಮ್ಮ ದುರಂತ ‘ ಬಿಜೆಪಿ ಮಂಡಲ ಉಪಾಧ್ಯಕ್ಷನಿಂದಲೇ ಸಂಸದನ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನದ ಪೋಸ್ಟ್ ವೈರಲ್ ಆಗಿದೆ. ರಸ್ತೆ ಸಮಸ್ಯೆಗೆ ಪರಿಹಾರ ಕೇಳಲು ಹೋದ ಬಿಜೆಪಿ ಮುಖಂಡರಿಗೆ ಅಧಿಕಾರಿಗಳ ಎದುರು ಅವಮಾನ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ MP ಬ್ರಿಜೇಶ್ ಚೌಟ ವಿರುದ್ಧ ಆಕ್ರೋಶದ ಕಿಚ್ಚು ಹೆಚ್ಚಾಗಿದೆ.
ಮೂಲ್ಕಿ -ಮೂಡಬಿದ್ರೆ ಬಿಜೆಪಿ ಉಪಾಧ್ಯಕ್ಷ ಸೂರಜ್ ಜೈನ್ ನಿಂದ ಬ್ರಿಜೇಶ್ ಚೌಟ ಬೇಜವಾಬ್ದಾರಿ ವರ್ತನೆ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಮೂಡಬಿದಿರೆಯ ಬನ್ನಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲು ಸಾವಾಗಿದ್ದು, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ಸುಮಾರು 8 ಜೀವಗಳು ಬಲಿಯಾಗಿದೆ. ಸರ್ವಿಸ್ ರಸ್ತೆ ಇಲ್ಲದೆ ಭೀಕರ ಸರಣಿ ಅಪಘಾತಗಳು ನಡೆಯುತ್ತಿದೆ. ಮಂಗಳೂರಿನಿಂದ ಕಾರ್ಕಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿಯಾಗಿದ್ದು, ಮೂರು ವರ್ಷಗಳಲ್ಲಿ 8 ಜೀವ ಬಲಿಯಾಗಿದೆ.
ಸರ್ವಿಸ್ ರಸ್ತೆ ಇಲ್ಲದೆ ಸುಮಾರು 20 ಸರಣಿ ಅಪಘಾತ ನಡೆದಿದೆ. ಕೇವಲ ಮೂರು ದಿನಗಳಲ್ಲಿ 4 ಅಪಘಾತ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಈ ವಿಚಾರವಾಗಿ ಸಂಸದರನ್ನ ಭೇಟಿಯಾಗಲು ಬಿಜೆಪಿ ಮುಖಂಡ ಸೂರಜ್ ಜೈನ್ ತಂಡ ಹೋಗಿದ್ದರು. ಈ ವೇಳೆ ಸಂಸದ ಬ್ರಿಜೇಶ್ ಚೌಟ ಉಡಾಫೆ ಉತ್ತರ ನೀಡಿದ್ದಾರೆ.
“ಈ ಅವಘಡಗಳಿಗೆ ಹೆದ್ದಾರಿ ಇಲಾಖೆಯೆ ಕಾಮಗಾರಿಯೆ ಕಾರಣ ಎಂದು ನೀವು ಹೇಗೆ ಹೇಳುತ್ತೀರಿ?. ಈ ಕಾಮಗಾರಿ ಪೂರ್ಣ ಆಗುವವರಗೆ ಸರ್ವಿಸ್ ರಸ್ತೆ ಮಾಡಲು ಸಾಧ್ಯವಿಲ್ಲ. 2023 ರಲ್ಲಿ ಮನವಿ ಕೊಟ್ಟಿದ್ದರೆ ಕೊಟ್ಟಿರುವವರ ಬಳಿ ಹೋಗಿ ಕೇಳಿ. “ನೀವೂ ಹೇಳಿದಂತೆ ಕಾಮಗಾರಿ ಮಾಡಲು ಸಾದ್ಯವಿಲ್ಲ.. “ ಜನರ ಪ್ರತಿಭಟನೆಗೆ ನಾನು ಹೆದರೊದಿಲ್ಲ. ಸ್ಥಳಕ್ಕೆ ಭೇಟಿ ನೀಡಲು ಕೇಳಿಕೊಂಡರೆ ಸದ್ಯಕ್ಕೆ ಸಾಧ್ಯವಿಲ್ಲ ಎಂದರು.
ಆ ಕಡೆ ಬಂದಾಗ ಸ್ಥಳಕ್ಕೆ ಬರುತ್ತೇನೆ ಎನ್ನುವ ಉಢಾಫೆಯ ಉತ್ತರ. ಸದ್ಯ ಬಿಜೆಪಿ ಸಂಸದನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬನ್ನಡ್ಕ ಸರಣಿ ಅಪಘಾತಗಳನ್ನ ಕಂಡು ಸಾರ್ವಜನಿಕರು ಧೃತಿಗೆಟ್ಟಿದ್ದಾರೆ. ಇತ್ತ ಸಂಸದರ ಉಢಾಫೆ ಉತ್ತರದಿಂದ ಜನರ ಆಕ್ರೋಶ ಹೆಚ್ಚಾಗಿದೆ.

