ಮಂಗಳೂರು : ನಗರದ ಪ್ರತಾಪ ನಗರದಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆಯಲಿರುವ ೭೯ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶ್ರೀ ದೇವರ ಮೃತಿಕ ವಿಗ್ರಹ ಪ್ರತಿಷ್ಠೆ ಸೋಮವಾರ ನೆರವೇರಿತು.
ಐದು ದಿನಗಳ ಪರ್ಯಂತ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದ್ದು ವಿವಿಧ ಧಾರ್ಮಿಕ , ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿರುವುದು . ವಿಗ್ರಹ ಪ್ರತಿಷ್ಠೆ ಬಳಿಕ ಸಾರ್ವಜನಿಕ ಗಣೇಶೋತ್ಸವದ ಚಾಲನೆಯನ್ನು ದೀಪ ಬೆಳಗಿಸುವುದರ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಪ್ರಚಾರಕರಾದ ಶ್ರೀ ಭರತ್ ಕುಮಾರ್ ನಡೆಸಿದರು . ಸಾಯಂಕಾಲ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಸ್ಪರ್ದಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಸಭಾಧ್ಯಕ್ಷರಾಗಿ ಸೇವ್ಈ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಬಿ . ಅರ್ಜುನ್ ಭಂಡಾರ್ಕರ್ ರವರು ಉಪಸ್ಥಿತರಿದ್ದು ಬಹುಮಾನ ವಿತರಣೆ ನಡೆಸಿದರು . ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ . ವಾಮನ್ ಶೆಣೈ , ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಮಹಾನಗರ ಮಾನ್ಯ ಸಂಘಚಾಲಕ್ ಡಾ . ಸತೀಶ್ ರಾವ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಪ್ರಚಾರಕರಾದ ಶ್ರೀ ಸುರೇಶ್ ಜಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು . ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ , ಶಾಸಕರಾದ ಡಾ . ಭರತ್ ಶೆಟ್ಟಿ , ವೇದವ್ಯಾಸ್ ಕಾಮತ್,
ಕೇಶವ ಸ್ಮ್ರತಿ ಸಂವರ್ಧನ ಟ್ರಸ್ಟ್ ನ ಉಪಾಧ್ಯಕ್ಷ ಶ್ರೀ ಕೆ . ರಘುವೀರ್ ಕಾಮತ್ , ಕಾರ್ಯದರ್ಶಿ ಗಜಾನನ ಪೈ , ಸೇವಾ ಭಾರತಿ ಪ್ರಮುಖ ವಿನೋದ್ ಶೆಣೈ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಉಪಾಧ್ಯಕ್ಷರುಗಳಾದ ಶ್ರೀ . ಆನಂದ ಪಾಂಗಳ , ಶ್ರೀ ಕೆ . ಪದ್ಮನಾಭ , ಸ್ಮಿತಾ ಎಂ , ಪ್ರಧಾನ ಕಾರ್ಯದರ್ಶಿ ಶ್ರೀ ಜಿ . ಸುರೇಶ್ ವಿ . ಕಾಮತ್ , ಸ್ವಾಮಿ ಪ್ರಸಾದ್ ಕೋಶಾಧಿಕಾರಿ ಶ್ರೀ ರಂಗನಾಥ್, ಜೆ . ಕೆ . ರಾವ್ , ಕೆ . ಪಿ . ಟೈಲರ್ , ತರುಣ್ ಕೆ ಥಾಕರ್ , ಹಾಗೂ ಜೊತೆಕಾರ್ಯದರ್ಶಿಗಳಾದ ನಂದನ್ ಮಲ್ಯ , ಜೀವನರಾಜ್ ಶೆಣೈ , ಗಣೇಶ್ ಪ್ರಸಾದ್ ಹಾಗೂ ಅಭಿಷೇಕ್ಪೂ ಭಂಡಾರಿ , ಪೂರ್ಣಿಮಾ ಶೆಣೈ ಉಪಸ್ಥಿತರಿದ್ದರು.

