ಮಂಗಳೂರು: ನಾಡಿನೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಇದರ ಅಂಗವಾಗಿ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಏಳನೇ ವರ್ಷದ ತುಪ್ಪದ ದೀಪೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.

ಪೊಳಲಿ ಟೈಗರ್ಸ್‌ನ ಸಂತೋಷ್ ಪೊಳಲಿ ಅವರ ಮುಂದಾಳತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ರಮಾನಾಥ್ ರೈ , ಸತ್ಯಜಿತ್ ಸುರತ್ಕಲ್ , ಜಿಲ್ಲಾ ಪಂಚಾಯತ್ ಸದಸ್ಯ ತುಂಬೆ ಪ್ರಕಾಶ್ ಶೆಟ್ಟಿ , ಸಂತೋಷ್ ಪೊಳಲಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ದೀಪಾವಳಿ ಪ್ರಯುಕ್ತ ಪೊಳಲಿ ದೇವಸ್ಥಾನದ ಆವರಣದಲ್ಲಿ ಆದಿತ್ಯವಾರ, ಸೋಮವಾರ , ಮಂಗಳವಾರ 3 ದಿನಗಳ ಕಾಲ ಪೊಳಲಿ ಟೈಗರ್ಸ್‌ನ ಸಂತೋಷ್ ಪೊಳಲಿ ಅವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೀಪೋತ್ಸವ ನಡೆಯಲಿದೆ.