ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಎರಡು ಅಪರಿಚಿತ ಶವ ಪತ್ತೆಯಾಗಿದೆ. ಹಳೇ ರೈಲ್ವೆ ನಿಲ್ದಾಣದ ಬಳಿಯ ಸೇತುವೆ ಕೆಳಗೆ ಹಾಗೂ ಬಸ್ ನಿಲ್ದಾಣದ ಬಳಿಯ ಉತ್ತರ ಕಾವೇರಿ ಸೇತುವೆ ಕೆಳಗೆ ಪತ್ತೆಯಾಗಿದೆ.ಸುಮಾರು 60 ವರ್ಷ ವಯಸ್ಸಿನ ವೃದ್ದೆ ಹಾಗೂ 30 ವರ್ಷ ವಯಸ್ಸಿನ ಯುವಕನ ಶವ ಪತ್ತೆಯಾಗಿದೆ.
ಯುವಕನ ಕೈ ಮೇಲೆ ಕಿರಾತಕ ಎಂದು ಹಾಗೂ ಎದೆಯ ಮೇಲೆ ಚಿನ್ನು, ತೇಜು ಎಂದು ಹಚ್ಚೆ ಇದೆ. ನೈಟಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿದೆ. ಅಪರಿಚಿತ ಶವದ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

