ಮಂಡ್ಯ: ಪಕ್ಕದ ಮನೆಯವನ ಬೆದರಿಕೆ, ಕಿರುಕುಳಕ್ಕೆ ಬೇಸತ್ತ ತಾಯಿ ಮಗಳು ನೇಣಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಪ್ರಿಯಾಂಕ (19), ಶಕುಂತಲಾದೇವಿ (46) ಮೃತರು.ಮೃತೆ ಪ್ರಿಯಾಂಕಳ ಮದುವೆಗೆ ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು. ಮದುವೆ ಸಿದ್ಧತೆ ನಡುವೆಯೇ ಮಗಳು, ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.