ದೆಹಲಿ : ಇದೀಗ ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದೆ. ಬೆಳ್ಳಿ ಬೆಲೆಯೂ ಭಾರಿ ಹೆಚ್ಚಳ ಕಂಡಿದೆ. ಇಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಒಂದೇ ದಿನಕ್ಕೆ 224 ರೂ ಏರಿಕೆಯಾಗಿದ್ದು, 10 ಗ್ರಾಂ ಗೆ 2240 ರೂ ಏರಿಕೆ ಆಗಿದೆ. ಆ ಮೂಲಕ 24 ಕ್ಯಾರೆಟ್‌ನ 1 ಗ್ರಾಂ ಬೆಲೆ 15884 ರೂ ಆಗಿದ್ದು, 10 ಗ್ರಾಂ ಬೆಲೆ 1,58,840 ರೂಪಾಯಿ ಆಗಿದೆ.

22 ಕ್ಯಾರೆಟ್ 1 ಗ್ರಾಂ ಬೆಲೆ 205 ರೂಪಾಯಿ ಹಾಗೂ 10 ಗ್ರಾಂ ನಲ್ಲಿ 2050 ರೂ ಏರಿಕೆಯಾಗಿ, 1,45,600 ರೂಪಾಯಿಗೆ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ಇಂದು 15 ರೂಪಾಯಿ ಏರಿಕೆಯಾಗಿದ್ದು, ಗ್ರಾಂ ಬೆಲೆ 300 ರೂ ಆಗಿದ್ದು, ಕೆಜಿ ಬೆಲೆಯಲ್ಲಿ 15 ಸಾವಿರ ಏರಿಕೆ ಆಗಿ, ಕೆಜಿಗೆ 3,00,000 ರೂಪಾಯಿ ಇದೆ.

ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 15884 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,58,840 ರೂಪಾಯಿ ಇದೆ.