ಮಂಡ್ಯ: ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೈದ ಘಟನೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಮದ್ದೂರು ತಾಲೂಕಿನ ಚುಂಚಗಳ್ಳಿ ಗ್ರಾಮದ ಸುನೀಲ್ (29) ಕೊಲೆಯಾದ ಯುವಕ. ಸುನೀಲ್ ತನ್ನ ಸ್ನೇಹಿತರಾದ ಸತೀಶ್, ಸಿದ್ದರಾಜು ಎಂಬವರೊಂದಿಗೆ ಮಂಗಳವಾರ ರಾತ್ರಿ 9:30ರ ಸುಮಾರಿಗೆ ಕೆ.ಹೊನ್ನಲಗೆರೆಯ ದೀಪ ಬಾರ್ ಗೆ ತೆರಳಿದ್ದರು. ಅಲ್ಲಿ ಮದ್ಯಪಾನ ಮಾಡುತ್ತಿದ್ದ ವೇಳೆ ತಂಡವೊಂದು ಬಾರ್ ಕ್ಯಾಶಿಯರ್ ಜೊತೆ ಮಾತಿನ ಚಕಮಕಿ ನಡೆಸಿದೆ. ಈ ವೇಳೆ ಸುನೀಲ್ ಮತ್ತು ಸ್ನೇಹಿತರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.