ಶ್ರೀನಿವಾಸಪುರ‌: ತಾಲ್ಲೂಕಿನ ಯಲ್ದೂರು-ಹೊಗಳಗೆರೆ ತೋಟದ ಮಧ್ಯೆ ಅಕ್ರಮವಾಗಿ ಇಸ್ಟೀಟ್ ಜೂಜಾಟದಲ್ಲಿ ತೊಡಗಿದ್ದ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಿಂತಾಮಣಿ ತಾಲ್ಲೂಕಿನ ಬರ‍್ಲಹಳ್ಳಿ ಗ್ರಾಮದ ನಾಗರಾಜು, ಶ್ರೀನಿವಾಸಪುರ ತಾಲ್ಲೂಕಿನ ದಿಗುವಚಿಂತಪಲ್ಲಿ ಗ್ರಾಮದ ರಾಜೇಂದ್ರಪ್ರಸಾದ್, ಹೆಬ್ಬಟ ನಾಸೀರ್ ಪಾಷ, ಮಂಜುನಾಥ್, ದಳಸನೂರು ಗ್ರಾಮದ ಮುರಳಿ, ಮೋಹನ್, ಅಲಂಗಿರಿ ನರಸಿಂಹಮೂರ್ತಿ, ಕಟ್ಟೆಕೆಳಗಿನ ಪಾಳ್ಯದ ಸುಧಾಕರ, ಕೋಲಾರ ಕೀಲಕೋಟೆಯ ಶ್ರೀನಿವಾಸ್ ಬಂಧಿತರು.

ಆರೋಪಿಗಳು ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ₹ 11,500 ನಗದು, ದ್ವಿಚಕ್ರ ವಾಹನ, ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಸ್‌ಪಿ ಕನ್ನಿಕಾ ಸಿಕ್ರಿವಾಲ್‌ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಮನೀಷಾ ಉಸ್ತವಾರಿಯಲ್ಲಿ ಸಿಪಿಐ ಬಿ.ಶಂಕರಚಾರಿ, ಪಿಎಸ್‌ಐ ಗಳಾದ ಜಯರಾಮ್, ಅರುಣ್‌ಗೌಡ, ಸಿಬ್ಬಂದಿ ನಾರಾಯಣಸ್ವಾಮಿ, ನಾಗರಾಜು, ಆನಂದ್, ವಿಜಿಕುಮಾರ್, ನಾಗಾರ್ಜುನ ಕಾರ್ಯಾಚರಣೆ ನಡೆಸಿದ್ದರು.